ಪ್ರೌಢ ಶಿಕ್ಷಣ ಮಂಡಳಿಯ ನಿರ್ಲಕ್ಷ್ಯ: ಮಂಗಳೂರಿನ ವಿದ್ಯಾರ್ಥಿಗೆ 114 ಅಂಕದ‌ ಬದಲು 87 ಅಂಕ(ಗಲ್ಪ್‌ ಕನ್ನಡಿಗ)ಮಂಗಳೂರು: ಪ್ರಭಾನ್ವಿತ ವಿದ್ಯಾರ್ಥಿನಿಯೊಬ್ಬಳು ಉತ್ತಮ‌ ಅಂಕಗಳನ್ನು ಪಡೆದು ಉತ್ತೀರ್ಣಳಾಗಿದ್ದರೂ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಎಡವಟ್ಟಿನಿಂದ ಅನುತ್ತೀರ್ಣಳಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.


(ಗಲ್ಪ್‌ ಕನ್ನಡಿಗ)ಆತೂರು ಬದ್ರಿಯ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯೊಬ್ಬಳು ಐದು ವಿಷಯಗಳಲ್ಲಿ ಉತ್ತಮ‌ ಅಂಕ ಪಡೆದಿದ್ದಳು.‌ ಆದರೆ ಕನ್ನಡ ವಿಷಯದಲ್ಲಿ 22 ಅಂಕ ಪಡೆದಿದ್ದಳು.


(ಗಲ್ಪ್‌ ಕನ್ನಡಿಗ)ಇದರಿಂದ ಆಘಾತಕ್ಕೊಳಗಾಗದ ವಿದ್ಯಾರ್ಥಿನಿ ಮತ್ತು ಪೋಷಕರು, ಇಲಾಖೆಗೆ ಹಣ ಕಟ್ಟಿ ಪತ್ರಿಕೆಯನ್ನು ತರಿಸಿ ನೋಡಿದ್ದಾರೆ.

ಈ ವೇಳೆ ಪ್ರೌಢ ಶಿಕ್ಷಣ ಮಂಡಳಿಯ ಯಡವಟ್ಟು ಬೆಳಕಿಗೆ ಬಂದಿದೆ.


(ಗಲ್ಪ್‌ ಕನ್ನಡಿಗ)ಪರೀಕ್ಷಾ ಮಂಡಳಿಯು ಅಂಕವನ್ನು ನಮೂದಿಸುವ ಕಾಲಂನಲ್ಲಿ ಒಟ್ಟು ಅಂಕಗಳನ್ನು ದಾಖಲಿಸುವ ಬದಲು ವಿದ್ಯಾರ್ಥಿನಿ ಪರೀಕ್ಷೆ ಬರೆದಿರುವ ಉತ್ತರ ಪತ್ರಿಕೆಯ ಒಟ್ಟು ಪುಟಗಳ ಸಂಖ್ಯೆ 22 ಎಂಬುದನ್ನು ನಮೂದಿಸಿತ್ತು. ಇದು ಮಾತ್ರವಲ್ಲದೆ ವಿದ್ಯಾರ್ಥಿನಿಯು ಗಳಿಸಿದ ಒಟ್ಟು ಅಂಕ 87 ಎಂದು ನಮೂದಿಸಿದೆ.


(ಗಲ್ಪ್‌ ಕನ್ನಡಿಗ)ಇದನ್ನೂ ಪರಿಶೀಲಿಸಿ ಅಂಕಗಳನ್ನು ಕೂಡಿಸಿದಾಗ 90 ಅಂಕ ಬಂದಿರುವುದು ತಿಳಿದಿದೆ. ಶಿಕ್ಷಣ ಇಲಾಖೆ ಒಟ್ಟು ಅಂಕಗಳನ್ನು ಬರೆಯುವಲ್ಲಿ 3 ಅಂಕಗಳನ್ನು ಬಿಟ್ಟು 87 ಎಂದು ನಮೂದಿಸಿ‌ ಎಡವಟ್ಟು ಮಾಡಿಕೊಂಡಿರುವುದು ಸ್ಪಷ್ಟವಾಗಿದೆ.ವಾಸ್ತವದಲ್ಲಿ ವಿದ್ಯಾರ್ಥಿನಿ ಉತ್ತರ ಪತ್ರಿಕೆಯಲ್ಲಿ 90 ಮತ್ತು ಇಂಟರ್ನಲ್ ಮಾರ್ಕ್ಸ್ 24 ಸೇರಿ 114 ಅಂಕಗಳಾಗುತ್ತವೆ. 

ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದರೂ ಪ್ರೌಢ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದ ಯಡವಟ್ಟಿನಿಂದಾಗಿ ವಿದ್ಯಾರ್ಥಿನಿ ಮತ್ತು ಆಕೆಯ ಪೋಷಕರು ಆಘಾತಕ್ಕೀಡಾಗುವಂತೆ ಮಾಡಿದೆ.