ಎನ್.ಎಸ್.ಯು.ಐ ವತಿಯಿಂದ ‘ನಮ್ಮೂರ ಹೆಮ್ಮೆ’ ಕಾರ್ಯಕ್ರಮಕ್ಕೆ ಮಿಥುನ್ ರೈ ಚಾಲನೆ
(ಗಲ್ಪ್ ಕನ್ನಡಿಗ)ಮಂಗಳೂರು: ಕರ್ನಾಟಕ ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ ವತಿಯಿಂದ ಎಸೆಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ‘ನಮ್ಮೂರ ಹೆಮ್ಮೆ’ ಕಾರ್ಯಕ್ರಮದಡಿ ಪ್ರಶಸ್ತಿ ಪತ್ರ ಹಾಗೂ ‘ಸಂವಿಂಧಾನ ಓದು’ ಎಂಬ ಪುಸ್ತಕ ನೀಡಿ ಸನ್ಮಾನಿಸುವ ಕಾರ್ಯಕ್ರಮ ರಾಜ್ಯಾದ್ಯಂತ ಹಮ್ಮಿಕೊಂಡಿದ್ದು, ದ.ಕ.ಜಿಲ್ಲೆಯ ಪ್ರತೀ ವಿಧಾಸಭಾ ಕ್ಷೇತ್ರದಲ್ಲೂ ಕಾರ್ಯಕ್ರಮ ನಡೆಯಲಿದೆ.
(ಗಲ್ಪ್ ಕನ್ನಡಿಗ)ಈ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ನಗರದ ಬಿಜೈ ಕಾಪಿಕಾಡ್ ನಿವಾಸಿ ಎಸೆಸೆಲ್ಸಿ ವಿದ್ಯಾರ್ಥಿಗಾಳದ ಗುರುದತ್, ಪೃಥ್ವಿ ಹಾಗೂ ಕಾರ್ಸ್ಟ್ರೀಟ್ ಪ್ರದೇಶದಲ್ಲಿ ವಾಸವಿರುವ ವಲಸೆ ಕಾರ್ಮಿಕನ ಪುತ್ರ ಪಿಯುಸಿ ವಿದ್ಯಾರ್ಥಿ ಹನುಮಂತ್ ಕುಮಾರ್ ಅವರಿಗೆ ಸನ್ಮಾನಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು.
(ಗಲ್ಪ್ ಕನ್ನಡಿಗ)ಪ್ರಸ್ತುತ ಹನುಮಂತ್ ಕುಮಾರ್ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ದರ್ಜೆ ಕಾಲೇಜಿಗೆ ಪ್ರವೇಶಾತಿ ಪಡೆದಿದ್ದು, ಈತನ ಮೂರು ವರ್ಷದ ಶೈಕ್ಷಣಿಕ ವಿದ್ಯಾಭ್ಯಸದ ಖರ್ಚು ಹಾಗೂ ಮಧ್ಯಾಹ್ನದ ಉಚಿತ ಊಟದ ವ್ಯವಸ್ಥೆ ಮಾಡಿಸುವ ಭರವಸೆ ಮಿಥುನ್ ರೈ ರವರು ನೀಡಿದರು.
ಈ ಸಂದರ್ಭದಲ್ಲಿ ಮಂಗಳೂರು ಉತ್ತರ ಯುವ ಕಾಂಗ್ರೆಸ್ ಅಧ್ಯಕ್ಷ ಗರೀಶ್ ಆಳ್ವ, ಎನ್.ಎಸ್.ಯು.ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ, ಎನ್.ಎಸ್.ಯು.ಐ ಮಂಗಳೂರು ಉತ್ತರ ಅಧ್ಯಕ್ಷ ಶೌನಕ್ ರೈ, ಶ್ರೇಯಸ್ ಭಟ್ ಉಪಸ್ಥಿತರಿದ್ದರು.