ಸ್ಥಳೀಯ ಮುಸ್ಲಿಂ ಯುವಕರಿಂದ ಬದುಕುಳಿದೆ; ಬೆಂಗಳೂರು ಗಲಭೆಗೆ ಕಾರಣನಾದ ನವೀನ್ ತಾಯಿ
Thursday, August 13, 2020
(ಗಲ್ಫ್ ಕನ್ನಡಿಗ)ಬೆಂಗಳೂರು: ಬೆಂಗಳೂರು ಗಲಭೆಗೆ ಕಾರಣನಾದ ನವೀನ್ ತಾಯಿ, ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಸಹೋದರಿ
ಜಯಂತಿ ಮಾಧ್ಯಮಕ್ಕೆ ಪ್ರತಿಕ್ರೀಯೆ ನೀಡಿ ಘಟನೆ ದಿನವನ್ನು ಮೆಲುಕು ಹಾಕಿದ್ದಾರೆ.
(ಗಲ್ಫ್ ಕನ್ನಡಿಗ)ಸ್ಥಳೀಯ ಮುಸ್ಲಿಂ ಯುವಕರು ರಕ್ಷಿಸದಿದ್ದರೆ ನಾನು ಬದುಕುಳಿಯುತ್ತಿರಲಿಲ್ಲ ಎಂದು ಹೇಳಿದ್ದಾರೆ.
(ಗಲ್ಫ್ ಕನ್ನಡಿಗ)
ಮಂಗಳವಾರ ಸಂಜೆ ಮನೆಯವರೆಲ್ಲರೂ ಟಿವಿ ನೋಡುತ್ತಿದ್ದರು. ಇತ್ತ ನವೀನ್ ಹಾಗೂ ಪತ್ನಿ ದಿನಸಿ ಖರೀದಿಗಾಗಿ ಅಂಗಡಿಗೆ ತೆರಳಿದ್ದರು. ಮನೆಯಲ್ಲಿ ಕುಳಿತು ಧಾರಾವಾಹಿ ನೋಡುತ್ತಿದ್ದ ಸಂದರ್ಭದಲ್ಲಿ ಮನೆಯ ಮುಂದೆ ಜನ ಜಮಾಯಿಸಿರುವುದು ಕಂಡು ಬಂದಿದೆ. ರಾತ್ರಿ 8.30 ಸುಮಾರಿಗೆ ಮನೆ ಮುಂದೆ ನಿಂತಿದ್ದ ಬೈಕ್ ಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಲು ಆರಂಭಿಸಿದ್ದಾರೆ. ಇದನ್ನು ನೋಡಿದ ನಾನು ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಪಕ್ಕದ ಮನೆಯ ಟೆರೇಸ್ ಗೆ ಹೋಗುವಂತೆ ಹೇಳಿದೆ.ಮನೆಯಲ್ಲಿ ಆಭರಣಗಳು ಹಾಗೂ ಹಣ ಇದ್ದುದ್ದರಿಂದ ನಾನು ಮನೆಯಲ್ಲೇ ಉಳಿದೆ. ಹೊರಗೆ ಸಾಕಷ್ಟು ಗದ್ದಲ ಇದ್ದರೂ ಅವರು ಮನೆಗೆ ಹಾನಿ ಮಾಡಲ್ಲ ಅಂತ ಭಾವಿಸಿದ್ದೆ. ಅಲ್ಲದೆ ಈ ಗಲಭೆ ನನ್ನ ಮನೆಗೆ ಸಂಬಂಧಿಸಿದ್ದು ಎಂದು ತಿಳಿದಿರಲಿಲ್ಲ ಎಂದರು.
(ಗಲ್ಫ್ ಕನ್ನಡಿಗ)ನಾನು ಬೀದಿಯಲ್ಲಿರುವ ಕೆಲವರಲ್ಲಿ ಈ ಬಗ್ಗೆ ವಿಚಾರಿಸಲು ಪ್ರಯತ್ನಿಸಿದೆ. ಆದರೆ ಅವರು ನನ್ನನ್ನು ನೋಡಲೇ ಇಲ್ಲ. ಅಲ್ಲಿದ್ದವರಲ್ಲಿ ಈ ಹಿಂದೆ ನಾನು ಯಾರನ್ನೂ ನೋಡಿರಲಿಲ್ಲ. ಆದರೆ ಪರಿಸ್ಥಿತಿ ಹದಗೆಡುತ್ತಾ ಹೋಗುತ್ತಿದ್ದಂತೆ ನಾನು ಭಯಗೊಂಡೆ. ಬೀದಿಗಳಲ್ಲಿ ನೂರಾರು ಜನ ಕಾರು, ಬೈಕ್‍ಗಳಿಗೆ ಬೆಂಕಿ ಹಚ್ಚಿ ಧ್ವಂಸ ಮಾಡುತ್ತಿದ್ದು, ಅಲ್ಲಿಂದ ಬಚಾವಾಗಲು ಆಗಲು ಯಾವುದೇ ದಾರಿ ನನಗಿರಲಿಲ್ಲ. ರಾತ್ರಿ 10.30ರ ಸುಮಾರಿಗೆ ನಾಲ್ಕೈದು ಮಂದಿ ಸ್ಥಳೀಯ ಮುಸ್ಲಿಂ ಯುವಕರು ಮನೆಗೆ ಬಂದು ಪರಿಸ್ಥಿತಿ ಬಿಗಡಾಯಿಸುತ್ತಿದೆ. ಹೀಗಾಗಿ ನೀವು ಈ ಕೂಡಲೇ ನಮ್ಮೊಂದಿಗೆ ಬನ್ನಿ ಎಂದರು. ಅದಾಗಲೇ ಗುಂಪೊಂದು ಮನೆಯ ಕಾಂಪೌಂಡ್ ಪ್ರವೇಶಿಸಿತ್ತು. ಇದೇ ವೇಳೆ ವ್ಯಕ್ತಿಯೊಬ್ಬ, ನವೀನ್ ತಾಯಿಯನ್ನು ರಕ್ಷಣೆ ಮಾಡುವ ಮೂಲಕ ನಮ್ಮ ಧರ್ಮಕ್ಕೆ ಅನ್ಯಾಯ ಮಾಡುತ್ತಿದ್ದಾನೆ ಎಂದು ಹೇಳಿದ್ದು ಕೇಳಿಸಿದೆ. ಈ ವೇಳೆ ನನ್ನನ್ನು ಕರೆದೊಯ್ಯಲು ಬಂದವರು ಯಾವುದೇ ಮಹಿಳೆ ಹಾಗೂ ಮಕ್ಕಳನ್ನು ಮುಟ್ಟಬಾರದು ಎಂದು ಗುಂಪಿಗೆ ಎಚ್ಚರಿಕೆ ನೀಡಿದರು. ಪಕ್ಕದ ಮನೆಗೆ ನಾನು ಹೋಗುತ್ತಿದ್ದಂತೆಯೇ ಗುಂಪು ನಮ್ಮ ಮನೆಗೆ ಬೆಂಕಿ ಹಚ್ಚಿಯೇ ಬಿಟ್ಟಿತ್ತು ಎಂದು ಅವರು ಹೇಳಿದ್ದಾರೆ.
(ಗಲ್ಫ್ ಕನ್ನಡಿಗ)