ಲಿಂಕ್ ಒತ್ತಿದಾಗ ಮಹಿಳೆಯ ಮೊಬೈಲ್ ನಿಂದ ರವಾನೆಯಾಯಿತು ಅಶ್ಲೀಲ ಚಿತ್ರ; ವಾಟ್ಸಪ್ ಗ್ರೂಪ್ ನಲ್ಲೂ ಬಿಸಿಬಿಸಿ ಚರ್ಚೆ
Friday, August 7, 2020
(ಗಲ್ಫ್ ಕನ್ನಡಿಗ)ಬೆಂಗಳೂರು; ಮೊಬೈಲ್ ಗೆ ಬಂದ ಲಿಂಕ್ ವೊಂದನ್ನು ಮಹಿಳೆಯೊಬ್ಬರು ಕ್ಲಿಕ್ಕಿಸಿ ಪೇಚಿಗೆ ಸಿಲುಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
(ಗಲ್ಫ್ ಕನ್ನಡಿಗ)ಬೆಂಗಳೂರಿನ ಮಹಿಳೆಯೊಬ್ಬರಿಂದ ಅವರ ಮೊಬೈಲ್ ನಲ್ಲಿದ್ದ ಸಂಪರ್ಕ ಸಂಖ್ಯೆಗೆ , ಅವರು ಅಡ್ಮಿನ್ ಆಗಿರುವ ವಾಟ್ಸಪ್ ಗ್ರೂಪ್ ಗಳಿಗೆ ಅಶ್ಲೀಲ ಪೊಟೋಗಳ ರವಾನೆಯಾಗಿದೆ. ಇದು ಮಹಿಳೆಯ ಪರಿಚಯದವರನ್ನು ಬೆಚ್ಚಿ ಬೀಳಿಸಿದೆ. ನೋಡಲು ಇದು ಮಹಿಳೆಯೆ ಅಶ್ಲೀಲ ಪೊಟೋ ರವಾನೆ ಮಾಡಿದಂತೆ ಭಾಸವಾಗುತ್ತಿತ್ತು. ಇದು ಮಹಿಳೆ ಮುಜುಗರ ಮತ್ತು ಮಾನಸಿಕ ಹಿಂಸೆ ಅನುಭವಿಸುವಂತೆ ಮಾಡಿದೆ.
(ಗಲ್ಫ್ ಕನ್ನಡಿಗ)ಬೆಂಗಳೂರಿನ ಬಸವನಗುಡಿಯ 36 ವರ್ಷದ ವಿವಾಹಿತ ಮಹಿಳೆ ಈ ಸಮಸ್ಯೆಯನ್ನೆದುರಿಸಿದವರು. ಇವರಿಗೆ ಜು. 30 ರಂದು ಅಪರಿಚಿತ ನಂಬರ್ ನಿಂದ ಕರೆ ಬಂದಿತ್ತು. ಮೊಬೈಲ್ ಕರೆ ಸ್ವೀಕರಿಸಿದಾಗ ನಿಮ್ಮ ಮೊಬೈಲ್ ನಂಬರ್ ಗೆ ಲಿಂಕ್ ಬಂದಿದೆ. ತೆರೆದು ನೋಡಿ ಎಂದು ಹೇಳಿ ಕರೆ ಕಟ್ ಮಾಡಲಾಗಿತ್ತು. ಕರೆ ಕಡಿತಗೊಂಡ ಬಳಿಕ ಮಹಿಳೆಯ ಮೊಬೈಲ್ ಹ್ಯಾಕ್ ಆಗಿದೆ. ಕೂಡಲೇ ಮಹಿಳೆ ಅಡ್ಮಿನ್ ಆಗಿರುವ ವಾಟ್ಸಪ್ ಗ್ರೂಪ್ ಗಳಿಗೆ ಅಶ್ಲೀಲ ಪೊಟೊ ಮತ್ತು ವಿಡಿಯೋ ರವಾನೆಯಾಗಿದೆ.
(ಗಲ್ಫ್ ಕನ್ನಡಿಗ)ಮಹಿಳೆಯ ನಂಬರ್ ನಿಂದ ಬಂದ ಅಶ್ಲೀಲ ಪೊಟೋ ಮತ್ತು ವಿಡಿಯೋ ಗಳಿಗೆ ಅಶ್ಲೀಲ ಪ್ರತಿಕ್ರಿಯೆಗಳನ್ನು ಕಳುಹಿಸಲು ಶುರು ಮಾಡಿದ್ದಾರೆ. ಇಷ್ಟು ಆದಾಗ ಮಹಿಳೆಗೆ ತಮ್ಮ ನಂಬರ್ ಹ್ಯಾಕ್ ಆಗಿರುವುದು ಗೊತ್ತಾಗಿದೆ.
(ಗಲ್ಫ್ ಕನ್ನಡಿಗ)ಇನ್ನು ಕೆಲವರು ಇದೇ ರೀತಿಯ ಪೊಟೋ ಕಳುಹಿಸುತ್ತಿರಿ. ಪ್ರತಿ ಪೊಟೋಗೆ ಹಣ ಕಳುಹಿಸುತ್ತೇವೆ. ನೀವು ಆರಾಮವಾಗಿ ಜೀವನ ಸಾಗಿಸಬಹುದು ಎಂದು ಹೇಳಿದ್ದಾರೆ.
(ಗಲ್ಫ್ ಕನ್ನಡಿಗ)ಮೊಬೈಲ್ ಗೆ ಲಿಂಕ್ ಓಪನ್ ಮಾಡಿ ಎಂದು ಕರೆ ಮಾಡಿದ ನಂಬರ್ ಸದ್ಯ ಅಸ್ತಿತ್ವದಲ್ಲಿ ಇಲ್ಲ. ಹೀಗಾಗಿ ಹ್ಯಾಕರ್ ಗಳೇ ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಮಾನಸಿಕ ಹಿಂಸೆ ಮತ್ತು ಮುಜುಗರ ಅನುಭವಿಸಿದ ಮಹಿಳೆ ದಕ್ಷಿಣ ವಿಭಾಗ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ.