ಕಾಡಾನೆ ಓಡಿಸುವಾಗ ಬಂದೂಕಿನಿಂದ ಸಿಡಿದ ಗುಂಡು; ಫಾರೆಸ್ಟ್ ವಾಚರ್ ಸಾವು
Friday, August 7, 2020
(ಗಲ್ಫ್ ಕನ್ನಡಿಗ)ಮಂಡ್ಯ; ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೂನನಕೊಪ್ಪಲುವಿನಲ್ಲಿ ಕಾಡಾನೆಯನ್ನು ಓಡಿಸುವ ಸಂದರ್ಭದಲ್ಲಿ ಬಂದೂಕಿನಿಂದ ಗುಂಡು ಸಿಡಿದು ಫಾರೆಸ್ಟ್ ವಾಚರ್ ವೊಬ್ಬರು ಸಾವನ್ನಪ್ಪಿದ್ದಾರೆ.
(ಗಲ್ಫ್ ಕನ್ನಡಿಗ)ಫಾರೆಸ್ಟ್ ವಾಚರ್ ಶಿವನಂಜಯ್ಯ (30) ಗುಂಡು ತಗುಲಿ ಮೃತರಾದವರು. ಶಿವನಂಜಯ್ಯ ಅವರು ಗುತ್ತಿಗೆ ಆಧಾರದ ಮೇಲೆ ಫಾರೆಸ್ಟ್ ವಾಚರ್ ಆಗಿ ಕೆಲಸ ಮಾಡುತ್ತಿದ್ದರು.
(ಗಲ್ಫ್ ಕನ್ನಡಿಗ)ಶಿಂಷಾ ಅರಣ್ಯ ಪ್ರದೇಶದಿಂದ ಬಂದಿದ್ದ 10 ಕಾಡಾನೆಗಳು ಕೂನನಕೊಪ್ಪಲುವಿನ ತೋಪೊಂದರಲ್ಲಿ ಬೀಡುಬಿಟ್ಟಿದ್ದವು. ಇದನ್ನು ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಚರಣೆ ನಡೆಸುತ್ತಿದ್ದರು. ಅರಣ್ಯ ಸಿಬ್ಬಂದಿಗಳು ಕಾಡಾನೆಗಳನ್ನು ಬಂದೂಕು ಶಬ್ದದಿಂದ ಬೆದರಿಸಿ ಕಾಡಿಗಟ್ಟಲು ನಿರ್ಧರಿಸಿದ್ದರು. ಈ ವೇಳೆ ಅಲ್ಲಿ ಸೇರಿದ್ದ ಜನರ ಕಿರುಚಾಟಕ್ಕೆ ಹೆದರಿದ ಆನೆಗಳು ಸಿಬ್ಬಂದಿ ಮೇಲೆ ದಾಳಿ ಮಾಡಲು ಮುಂದಾಗಿದೆ.
(ಗಲ್ಫ್ ಕನ್ನಡಿಗ)ಈ ವೇಳೆ ಅಲ್ಲಿದ್ದ ಸಿಬ್ಬಂದಿಗಳು ಓಡುವ ವೇಳೆ ಫಾರೆಸ್ಟ್ ಗಾರ್ಡ್ ಪ್ರಕಾಶ್ ಅಡಚದ ಎಂಬವರ ಬಂದೂಕಿನಿಂದ ಗುಂಡು ಆಕಸ್ಮಿಕವಾಗಿ ಹಾರಿದೆ. ಅದು ಶಿವನಂಜಯ್ಯ ಅವರ ಬೆನ್ನಿಗೆ ಬಿದ್ದು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಗಲ್ಫ್ ಕನ್ನಡಿಗ)