ಆಗಷ್ಟ್ 10 ರಂದು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ; ಸಂಪೂರ್ಣ ಮಾಹಿತಿ ಇಲ್ಲಿದೆ
Friday, August 7, 2020
(ಗಲ್ಫ್ ಕನ್ನಡಿಗ)ಬೆಂಗಳೂರು; ಈ ಬಾರಿಯ ಎಸ್ ಎಸ್ ಎಲ್ ಸಿ ಫಲಿತಾಂಶ ಸೋಮವಾರ ( ಆಗಷ್ಟ್ 10 ) ರಂದು ಪ್ರಕಟವಾಗಲಿದೆ.
(ಗಲ್ಫ್ ಕನ್ನಡಿಗ)ಫೇಸ್‌ಬುಕ್ ನಲ್ಲಿ ಈ ವಿಚಾರವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ. SSLC ಪರೀಕ್ಷೆಗಳ ಫಲಿತಾಂಶವನ್ನು ಸೋಮವಾರ 10-8-2020 ರಂದು ಮಧ್ಯಾಹ್ನ 3.00 ಗಂಟೆಗೆ ಪ್ರಕಟಿಸಲಾಗುವುದು ಎಂದು ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
(ಗಲ್ಫ್ ಕನ್ನಡಿಗ)ಟಿವಿ ಮಾಧ್ಯಮವೊಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಇಂದು ಪ್ರಕಟವಾಗಲಿದೆ ಎಂದು ನಿನ್ನೆ ಭಿತ್ತರಿಸಿತ್ತು. ಬಳಿಕ ಫೇಸ್ ಬುಕ್ ಮೂಲಕವೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅದನ್ನು ಸುಳ್ಳು ಎಂದು ಸ್ಪಷ್ಟಪಡಿಸಿದ್ದರು. ಇಂದು ಫೇಸ್ ಬುಕ್ ಮೂಲಕವೆ ಎಸ್ ಎಸ್ ಎಲ್ ಸಿ ಫಲಿತಾಂಶ ಆಗಷ್ಟ್ 10 ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ.
(ಗಲ್ಫ್ ಕನ್ನಡಿಗ)ಫಲಿತಾಂಶವನ್ನು ವಿದ್ಯಾರ್ಥಿಗಳ ಮೊಬೈಲ್ ಗೆ ಕಳುಹಿಸಿಕೊಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ. SSLC ಬೋರ್ಡ್ ಅಧಿಕೃತ ವೆಬ್ ಸೈಟ್ www.sslc.kar.nic.in ಹಾಗೂ karresults.nic.in ನಲ್ಲಿ ಪಡೆಯಬಹುದಾಗಿದೆ.
(ಗಲ್ಫ್ ಕನ್ನಡಿಗ)ಆಗಷ್ಟ್ 10 ರಂದು ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ.