5 ವರ್ಷದ ಮಗುವನ್ನು ನೀರಿನಲ್ಲಿ ಮುಳುಗಿಸಿ ತಾಯಿ ಆತ್ಮಹತ್ಯೆ
Friday, August 7, 2020
(ಗಲ್ಫ್ ಕನ್ನಡಿಗ)ರಾಯಚೂರು; ಐದು ವರ್ಷದ ಮಗುವನ್ನು ನೀರಿನಲ್ಲಿ ಮುಳುಗಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
(ಗಲ್ಫ್ ಕನ್ನಡಿಗ)ರಾಯಚೂರು ಜಿಲ್ಲೆಯ ಮಾನವಿ ಪಟ್ಟಣದ 7 ನೇ ವಾರ್ಡ್ ನ ಕೋನಾಪುರ ಪೇಟೆಯಲ್ಲಿ ಈ ಘಟನೆ ನಡೆದಿದೆ.
27 ವರ್ಷದ ಜಾನಕಿ, 5 ವರ್ಷದ ಮಗು ರಾಘವೇಂದ್ರ ಸಾವನ್ನಪ್ಪಿದ್ದಾರೆ.
(ಗಲ್ಫ್ ಕನ್ನಡಿಗ)ಮಗುವನ್ನು ಮನೆಯಲ್ಲಿ ನೀರು ತುಂಬಿಸುವ ಬ್ಯಾರೆಲ್ ನಲ್ಲಿ ಮುಳುಗಿಸಿ ಮಗುವನ್ನು ಕೊಂದ ತಾಯಿ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಹಿಳೆಯ ಪತಿ ನಾಪತ್ತೆಯಾಗಿದ್ದಾರೆ.
(ಗಲ್ಫ್ ಕನ್ನಡಿಗ)ಕೌಟುಂಬಿಕ ಕಲಹವೆ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದ್ದು ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.