-->

ಅಂತಾರಾಜ್ಯ ಸಂಚಾರ ನಿರ್ಬಂಧ ರದ್ದು: ರಾಜ್ಯಗಳಿಗೆ ಕೇಂದ್ರ ಸೂಚನೆ; ಮಂಗಳೂರು-ಕಾಸರಗೋಡು ಪ್ರಯಾಣ ಅಬಾಧಿತ?

ಅಂತಾರಾಜ್ಯ ಸಂಚಾರ ನಿರ್ಬಂಧ ರದ್ದು: ರಾಜ್ಯಗಳಿಗೆ ಕೇಂದ್ರ ಸೂಚನೆ; ಮಂಗಳೂರು-ಕಾಸರಗೋಡು ಪ್ರಯಾಣ ಅಬಾಧಿತ?


ಹೊಸದಿಲ್ಲಿ: ಅಂತಾರಾಜ್ಯ ಮತ್ತು ರಾಜ್ಯಗಳ ಒಳಗೆ ಜನ ಸಂಚಾರ ಮತ್ತು ಸರಕು ಸಾಗಣೆಗೆ ನಿರ್ಬಂಧವನ್ನು ರದ್ದುಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುತ್ತೋಲೆ ಹೊರಡಿಸಿದೆ. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮಾಡಲಾಗಿದ್ದ ನಿರ್ಬಂಧಗಳನ್ನು ತಕ್ಷಣದಿಂದ ರದ್ದುಗೊಳಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ


ಇದರೊಂದಿಗೆ ಕರ್ನಾಟಕ ಮತ್ತು ಕೇರಳ ಗಡಿಯಲ್ಲಿ ಉಂಟಾಗಿರುವ ಸಂಚಾರ ನಿರ್ಬಂಧ ಸಡಿಲಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ನಡುವೆ ಸಂಚಾರ ಕಗ್ಗಂಟಾದ್ದು, ಸಂಚಾರ ಸಂಕಷ್ಟ ಬಗೆಹರಿಯಬೇಕು ಎಂದು ಸಾಮಾಜಿಕವಾಗಿ ಒತ್ತಾಯ ಕೇಳಿಬಂದಿತ್ತು.


ಜನರ ಮತ್ತು ಸರಕುಗಳ ಸಂಚಾರಕ್ಕೆ ನಿರ್ಬಂಧ ಪೂರೈಕೆ ಸರಪಳಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಅಲ್ಲದೆ ಇದು ವಿಪತ್ತು ನಿರ್ವಹಣೆ ಕಾಯ್ದೆ, 2005ರ ಅನ್ವಯ ಕೇಂದ್ರ ಗೃಹ ಇಲಾಖೆ ಹೊರಡಿಸಿದ ಮಾರ್ಗಸೂಚಿಯ ಉಲ್ಲಂಘನೆಯಾಗುತ್ತದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಹೀಗಾಗಿ ರಾಜ್ಯ ಅಥವಾ ಅಂತಾರಾಜ್ಯ ಸರಕು, ಸೇವೆಗಳು ಮತ್ತು ಜನರ ಸಂಚಾರಕ್ಕೆ ಯಾವುದೇ ನಿರ್ಬಂಧ ಹೇರುವಂತಿಲ್ಲ. ಜತೆಗೆ ಇದಕ್ಕೆ ವಿಶೇಷ ಪಾಸ್‌, ಅನುಮತಿ ಪಡೆಯುವ ಅಗತ್ಯವೂ ಇಲ್ಲ ಎಂದು ಭಲ್ಲಾ ಹೇಳಿದ್ದಾರೆ.


ನಮಗೆ ಯಾವುದೇ ಸೂಚನೆ ಬಂದಿಲ್ಲ: ಕಾಸರಗೋಡು ಜಿಲ್ಲಾಧಿಕಾರಿ ಡಾ. ಸಜಿತ್ ಬಾಬು

ಕೇಂದ್ರ ಸರಕಾರ ಹೊರಡಿಸಿದ ಅಧಿಸೂಚನೆಯು ದಕ್ಷಿಣ ಕನ್ನಡದ ವಿವಿಧ ಪ್ರದೇಶಗಳಿಂದ ನೆರೆಯ ಕೇರಳದ ಕಾಸರಗೋಡು ಮತ್ತಿತರ ಪ್ರದೇಶಗಳಿಗೆ ದೈನಿಕ ಉದ್ಯೋಗ ಮತ್ತು ಇತರ ಅಗತ್ಯಗಳಿಗಾಗಿ ತೆರಳುವ ಜನರ ಸಂಕಷ್ಟವನ್ನು ಕೊನೆಗಾಣಿಸುವ ನಿರೀಕ್ಷೆ ಇದೆ.


ಆದರೆ ಕೇಂದ್ರದ ಆದೇಶದ ಬಗ್ಗೆ ಕೇರಳ ಸರಕಾರದಿಂದ ಯಾವುದೇ ಸಲಹೆ ಬಂದಿಲ್ಲ ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ತಿಳಿಸಿದ್ದು, ಕೇರಳ ಸರಕಾರದ ನಿರ್ದೇಶನದಂತೆ ನಡೆಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಸಮಸ್ಯೆಯ ಬಗ್ಗೆ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಜತೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಸೋಮವಾರ ಚರ್ಚಿಸಲಿದ್ದು, ಸ್ಪಷ್ಟ ಚಿತ್ರಣ ಲಭಿಸುವ ಸಾಧ್ಯತೆಯಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99