ಬಿಜೈ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಗುದ್ದಲಿಪೂಜೆ
(ಗಲ್ಪ್ ಕನ್ನಡಿಗ)ಮಂಗಳೂರು:ಮಂಗಳೂರು ಮಹಾನಗರ ಪಾಲಿಕೆಯ ಬಿಜೈ ವಾರ್ಡಿನಲ್ಲಿ ರಸ್ತೆ ಹಾಗೂ ಸೇತುವೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.
(ಗಲ್ಪ್ ಕನ್ನಡಿಗ)ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಬಿಜೈ ವಾರ್ಡಿನ ರಾಬರ್ಟ್ ರೆಸಿಡೆನ್ಸಿಯಿಂದ ಬಲಭಾಗದ ಕೆ.ಎಂ.ಸಿ ಹಾಸ್ಟೆಲ್ ಬೌಂಡರಿ ಲೈನ್ ಪೂರ್ವದಿಂದ ಪಶ್ಚಿಮದ ಆನೆಗುಂಡಿಯ 2ನೇ ಮತ್ತು 3ನೇ ಅಡ್ಡರಸ್ತೆಯ ನಡುವೆ ಸೇತುವೆ ಹಾಗೂ ಕಾಂಕ್ರೀಟ್ ಕಾಮಗಾರಿಗೆ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಯಿಂದ 18 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ. ಇಲ್ಲಿನ ಸಾರ್ವಜನಿಕರಿಗೆ ನಿತ್ಯ ಓಡಾಟಕ್ಕೆ ಈ ರಸ್ತೆಯನ್ನೇ ಅವಲಂಬಿಸಿರುವ ಕಾರಣ ಅನುದಾನ ಬಿಡುಗಡೆಗೊಳಿಸಿ ಅಭಿವೃದ್ಧಿ ಕಾಮಗಾರಿಗೆ ಇಂದು ಗುದ್ದಲಿಪೂಜೆ ನೆರವೇರಿಸಲಾಯಿತು ಎಂದರು.
ಗಲ್ಫ್ ಕನ್ನಡಿಗ whatsapp ಗ್ರೂಪ್ join ಆಗಲು ಇಲ್ಲಿ ✅ ಮಾಡಿ
(ಗಲ್ಪ್ ಕನ್ನಡಿಗ)ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ, ಜಗದೀಶ್ ಶೆಟ್ಟಿ ಬೋಳೂರು, ಬಿಜೆಪಿ ಮುಖಂಡರಾದ ಪ್ರಶಾಂತ್ ಆಳ್ವ, ಭಾಸ್ಕರ್ ಚಂದ್ರ ಶೆಟ್ಟಿ, ವಸಂತ್ ಜೆ ಪೂಜಾರಿ, ನಾರಾಯಣ, ಕಾರ್ತ್ಯಾಯಿನಿ ರಾವ್, ದಯಾನಂದ್, ಉಮೇಶ್ ಶೆಟ್ಟಿ, ಚಂದ್ರಹಾಸ್, ಪ್ರಶಾಂತ್, ರಂಜು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.