-->

ಮಂಗಳೂರಿನಲ್ಲಿ ಪತ್ರಕರ್ತರನ್ನು ಇಕ್ಕಟ್ಟಿಗೆ ಸಿಲುಕಿಸಿದ ಕಾಂಗ್ರೆಸ್!

ಮಂಗಳೂರಿನಲ್ಲಿ ಪತ್ರಕರ್ತರನ್ನು ಇಕ್ಕಟ್ಟಿಗೆ ಸಿಲುಕಿಸಿದ ಕಾಂಗ್ರೆಸ್!





(ಗಲ್ಪ್ ಕನ್ನಡಿಗ) ಮಂಗಳೂರು: ಕೊರೊನಾ ಸೋಂಕು ಬಂದ ಮೇಲೆ ಎಲ್ಲರೂ ಜಾಗರೂಕರಾಗಿದ್ದಾರೆ. ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಬಳಸುವುದು, ಎಸಿ ಬಳಸದಿರುವುದು, ಕೈ ಕುಲುಕದಿರುವುದು ಮೊದಲಾದ ಜಾಗ್ರತೆಗಳನ್ನು ಜನರು ಮಾಡುತ್ತಿದ್ದಾರೆ. ಇದನ್ನು ಜನರಲ್ಲಿ ಜಾಗ್ರತಿ ಮೂಡಿಸುತ್ತಿರುವ ಪತ್ರಕರ್ತರು ಮಾಡುತ್ತಾರೆ. ಆದರೆ ಈ ಜಾಗ್ರತಿಯನ್ನು ಮೂಡಿಸುತ್ತಿರುವ ಪತ್ರಕರ್ತರಿಗೆ ಕಾಂಗ್ರೆಸ್ ಪಕ್ಷದ ನಿರ್ಲಕ್ಷ್ಯತನ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

ಗಲ್ಫ್ ಕನ್ನಡಿಗ whatsapp ಗ್ರೂಪ್ join ಆಗಲು ಇಲ್ಲಿ ಕ್ಲಿಕ್ ✅ ಮಾಡಿ



(ಗಲ್ಪ್ ಕನ್ನಡಿಗ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವ್ಯಾಪಾಕವಾಗುತ್ತಿದ್ದಂತೆ ಎಲ್ಲರಂತೆ ಪತ್ರಕರ್ತರು ಕೊರೊನಾ ಸೋಂಕಿಗೆ ಸಿಲುಕದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಎಲ್ಲರೂ ಮನೆಯಲ್ಲಿ ಕೂತು ಕೊರೊನಾದಿಂದ ದೂರ ಇರಿ ಎಂದು ಜಾಗ್ರತೆ ಮೂಡಿಸುತ್ತಿದ್ದ ಪತ್ರಕರ್ತರು ಸುದ್ದಿಗಾಗಿ ಬೀದಿಯಲ್ಲಿದ್ದರೂ ಅಗ್ತಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. ಮಂಗಳೂರಿನಲ್ಲಿರುವ ಪ್ರೆಸ್ ಕ್ಲಬ್ ನಲ್ಲಿ ನಡೆಯುವ ಪತ್ರಿಕಾಗೋಷ್ಟಿಯನ್ನು ನಡೆಸಲು ಅವಕಾಶವಿಲ್ಲ. ಲಾಕ್ ಡೌನ್ ತೆರವು ಮಾಡಿದ ಸಂದರ್ಭದಲ್ಲಿ ಕೆಲದಿನಗಳ ಕಾಲ ನಡೆದ ಪತ್ರಿಕಾಗೋಷ್ಟಿಯಲ್ಲಿಯೂ ಎಸಿ ಬಳಸದೆ ಸಭಾಂಗಣ ಉಪಯೋಗಿಸಲಾಗಿತ್ತು.


(ಗಲ್ಪ್ ಕನ್ನಡಿಗ) ಪತ್ರಕರ್ತರ ಮುನ್ನೆಚ್ಚರಿಕೆ ನಡುವೆಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ವರು ಪತ್ರಕರ್ತರಿಗೆ ಕೊರೊನಾ ಬಂದಿದೆ. ಇದರ ನಡುವೆಯೂ ಕಾಂಗ್ರೆಸ್ ನಿಂದ ಖಾದರ್‌, ಐವನ್ ಡಿ ಸೋಜ ಪತ್ರಿಕಾಗೋಷ್ಟಿಯನ್ನು ಕರೆಯುವುದಕ್ಕೆ ಮಿತಿಯೆ ಇರಲಿಲ್ಲ. ಹೇಳಿಕೆಗಳ ವಿಡಿಯೋಗಳನ್ನು ಪತ್ರಕರ್ತರಿಗೆ ಕಳುಹಿಸಿಕೊಡುವ ಅವಕಾಶವಿದ್ದರೂ ಪತ್ರಕರ್ತರನ್ನು ಕರೆದು ಪತ್ರಿಕಾಗೋಷ್ಟಿ ಮಾಡುವುದನ್ನು ಮುಂದುವರಿಸಿದ್ದರೂ. ಇವರು ಕರೆಯುವ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸುವ ಪತ್ರಕರ್ತರ ಸಂಖ್ಯೆ ಕಡಿಮೆಯಿದ್ದರೂ ಪತ್ರಿಕಾಗೋಷ್ಟಿ ಕರೆಯುವ ಛಾಳಿ ಬಿಟ್ಟಿರಲಿಲ್ಲ.


(ಗಲ್ಪ್ ಕನ್ನಡಿಗ) ಮಾಜಿ ಸಚಿವ ಯು ಟಿ ಖಾದರ್ ಮತ್ತು ಐವನ್ ಡಿಸೋಜ ಕೊರೊನಾ ಸೋಂಕಿತರನ್ನು ಭೇಟಿಯಾಗುವುದು, ಸಾವು ಸಂಭವಿಸಿದ್ದಲ್ಲಿ ಹೋಗಿ ಬರುವುದು ನಡೆಯುತ್ತಿದ್ದರೂ ಪತ್ರಿಕಾಗೋಷ್ಟಿ ಕರೆದು ಪತ್ರಕರ್ತರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು. ಇದರ ನಡುವೆ ಜಿಲ್ಲೆಗೆ ಬಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಪತ್ರಿಕಾಗೋಷ್ಟಿಯನ್ನು ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿತ್ತು.


(ಗಲ್ಪ್ ಕನ್ನಡಿಗ) ಡಿಕೆಶಿ ಪತ್ರಿಕಾಗೋಷ್ಟಿಯನ್ನು ನಡೆಸುವ ಮುನ್ನಾದಿನ ಹಲವು ಪತ್ರಕರ್ತರು ಡಿಕೆಶಿವಕುಮಾರ್ ಪತ್ರಿಕಾಗೋಷ್ಟಿಯನ್ನು ಕಾಂಗ್ರೆಸ್ ಕಚೇರಿಯ ಮೂರನೇ ಮಹಡಿಯಲ್ಲಿರುವ ಸಭಾಂಗಣದಲ್ಲಿ ನಡೆಸಲು ಸೂಚಿಸಿದ್ದರು. ಸಾಧಾರಣವಾಗಿ ಪತ್ರಿಕಾಗೋಷ್ಟಿ ನಡೆಯುವ ಎರಡನೇ ಮಹಡಿಯ ಕೋಣೆ ಹವಾನಿಯಂತ್ರಿತವಾಗಿರುವುದರಿಂದ ಮೂರನೇ ಮಹಡಿಯಲ್ಲಿ ಮಾಡುವಂತೆ ಸೂಚಿಸಿದ್ದರು. ಆದರೆ ಹಠಕ್ಕೆ ಬಿದ್ದ ಕಾಂಗ್ರೆಸ್ ನಾಯಕರು ಎರಡನೇ ಮಹಡಿಯಲ್ಲಿ ಪತ್ರಿಕಾಗೋಷ್ಟಿಯನ್ನು ಆಯೋಜಿಸಿದ್ದರು.

(ಗಲ್ಪ್ ಕನ್ನಡಿಗ) ಡಿ ಕೆ ಶಿವಕುಮಾರ್ ಕರೆದ ಪತ್ರಿಕಾಗೋಷ್ಟಿಯಲ್ಲಿ ಕೊರೊನಾ ಪಾಸಿಟಿವ್ ಆಗಿ 14 ದಿನವಷ್ಟೆ ಆದ ಮಿಥುನ್ ರೈ, ಮರುದಿನ ಪಾಸಿಟಿವ್ ಬಂದ ಐವನ್ ಡಿಸೋಜ ಭಾಗವಹಿಸಿದ್ದರು. ಹವಾನಿಯಂತ್ರಿತ ಕೋಣೆಯಲ್ಲಿ ಕೊರೊನಾ ಸೋಂಕು ಹರಡುವ ಪ್ರಮಾಣ ಹೆಚ್ಚಿಗಿರುತ್ತದೆ ಎಂದುಅಂದಾಜಿಸಲಾಗಿದೆ. ಇದರ ನಡುವೆ ಪತ್ರಕರ್ತರನ್ನು ಹವಾನಿಯಂತ್ರಿತ ಕೋಣೆಯಲ್ಲಿ ಕೂರಿಸಿ ಪತ್ರಿಕಾಗೋಷ್ಟಿ ಮಾಡಿರುವುದು ಪತ್ರಕರ್ತರನ್ನು ಆತಂಕಕ್ಕಈಡುಮಾಡಿದೆ.

(ಗಲ್ಪ್ ಕನ್ನಡಿಗ) ಇದೀಗ ಕಾಂಗ್ರೆಸ್ ಪಕ್ಷದ ನಿರ್ಲಕ್ಷ್ಯಕ್ಕೆ ಮಂಗಳೂರಿನಲ್ಲಿ ಡಿ ಕೆ ಶಿವಕುಮಾರ್ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ ಪತ್ರಕರ್ತರು ಸ್ವಯಂ ಕ್ವಾರಂಟೈನ್ ಆಗಬೇಕಾಗಿದೆ. ಪತ್ರಕರ್ತರು ಸ್ವಯಂ ಕ್ವಾರಂಟೈನ್ ಆಗುವುದಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಇದರಂತೆ ಇಂದಿನಿಂದ ಡಿ ಕೆ ಶಿವಕುಮಾರ್ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ ಹೆಚ್ಚಿನ ಪತ್ರಕರ್ತರು ಸ್ವಯಂ ಕ್ವಾರಂಟೈನ್ ಆಗಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ನಿರ್ಲಕ್ಷ್ಯಕ್ಕೆ ಮಂಗಳೂರಿನ ಪತ್ರಕರ್ತರು ಇಕ್ಕಟ್ಟಿಗೆ ಸಿಲುಕುವಂತೆ ಅಗಿದೆ


(ಗಲ್ಪ್ ಕನ್ನಡಿಗ)

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99