ಕಾಸರಗೋಡಿನಲ್ಲಿ ತಂಗಿಗೆ ವಿಷ ಬೆರೆಸಿ ಐಸ್ ಕ್ರೀಂ ಕೊಟ್ಟ ಅಣ್ಣ; ಸಹೋದರ ಕೊಟ್ಟ ಐಸ್ ಕ್ರೀಂ ತಿಂದ ಬಾಲಕಿ ಸಾವು


(ಗಲ್ಫ್ ಕನ್ನಡಿಗ)ಕಾಸರಗೋಡು;  ಅಣ್ಣ ಕೊಟ್ಟ ಐಸ್ ಕ್ರೀಂ ತಿಂದ ಬಾಲಕಿಯೊಬ್ಬಳು ಸಾವನ್ಬಪ್ಪಿದ ಘಟನೆ  ಕಾಸರಗೋಡಿನಲ್ಲಿ ನಡೆದಿದೆ.

(ಗಲ್ಫ್ ಕನ್ನಡಿಗ)ಅಣ್ಣ ಬಾಲಕಿಗೆ ನೀಡಿದ ಐಸ್ ಕ್ರೀಂ ನಲ್ಲಿ ವಿಷ ಬೆರೆಸಿ ಕೊಟ್ಟದ್ದೆ ಬಾಲಕಿ ಸಾವಿಗೆ ಕಾರಣವಾಗಿದೆ.

(ಗಲ್ಫ್ ಕನ್ನಡಿಗ)ಅನ್ ಮೇರಿ ( 16 ) ಎಂಬ ಬಾಲಕಿ ಸಾವನ್ನಪ್ಪಿದ್ದಾಕೆ.  ಈಕೆಯ ಸಹೋದರ ಅಲ್ಬಿನ್ ಬೆನ್ನಿ  ತಂಗಿಗೆ ನೀಡಿದ ವಿಷದ ಐಸ್ ಕ್ರೀಂ ನಿಂದ ಈಕೆಯ ಪ್ರಾಣ ಹೋಗಿದೆ.

(ಗಲ್ಫ್ ಕನ್ನಡಿಗ)ಆಲ್ಬಿನ್ ಬೆನ್ನಿ ಗೆ ತನ್ನ ಕುಟುಂಬವನ್ನೆ ಕೊಲ್ಲುವ ಉದ್ದೇಶವಿತ್ತು.  ಅದಕ್ಕಾಗಿ ಮೊದಲು ಮನೆಯಲ್ಲಿ ಮಾಡಿದ ಚಿಕನ್ ಕರಿಯಲ್ಲಿ ವಿಷ ಬೆರೆಸಿದ್ದನು. ಆದರೆ ಅದರಿಂದ ಯಾರ ಮೇಲೂ ಪರಿಣಾಮ ಬಿದ್ದಿರಲಿಲ್ಲ. 

(ಗಲ್ಫ್ ಕನ್ನಡಿಗ)ಜುಲೈ 29 ಕ್ಕೆ ಮತ್ತೊಮ್ಮೆ ವಿಷ ಖರೀದಿಸಿದ ಅಲ್ಬಿನ್ 30 ರಂದು ಐಸ್ ಕ್ರೀಂ ನಲ್ಲಿ ಅದನ್ನು ಬೆರೆಸಿ ಪ್ರಿಡ್ಜ್ ನಲ್ಲಿ ಇಟ್ಟಿದ್ದನು. ಆಗಷ್ಟ್ 3 ರಂದು ಮನೆಯವರಿಗೆ ಐಸ್ ಕ್ರೀಂ ನೀಡಿದ್ದು ಐಸ್ ಕ್ರೀಂ ತಿಂದ ತಂಗಿ ಮತ್ತು ತಂದೆ ಆಸ್ಪತ್ರೆ ಸೇರಿದ್ದರು.  ತಂಗಿ ಸಾವನ್ನಪ್ಪಿದ್ದು ತಂದೆ ಚಿಂತಾಜನಕ ಸ್ಥಿತಿಯಲ್ಲಿ ಇದ್ದಾರೆ.

(ಗಲ್ಫ್ ಕನ್ನಡಿಗ)ತಾಯಿ ಐಸ್ ಕ್ರೀಂ ತಿನ್ನದೆ ಪ್ರಾಣಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಆಲ್ಬಿನ್ ಬೆನ್ನಿ ಯನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿದ್ದಾರೆ

(ಗಲ್ಫ್ ಕನ್ನಡಿಗ)