Shocking story; ಬೆಕ್ಕಿನ ಮರಿಗಾಗಿ ಆಸೆಪಟ್ಟು ಪ್ರಾಣತ್ಯಾಗ ಮಾಡಿದ 14 ರ ಬಾಲಕ
Friday, August 14, 2020
(ಗಲ್ಫ್ ಕನ್ನಡಿಗ)ಲಕ್ನೋ; 14 ರ ಬಾಲಕನೊಬ್ಬ ಬೆಕ್ಕಿನ ಮರಿಗಾಗಿ ಆಸೆ ಪಟ್ಟು ಪ್ರಾಣತ್ಯಾಗ ಮಾಡಿದ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.
(ಗಲ್ಫ್ ಕನ್ನಡಿಗ)ಇಲ್ಲಿನ 14 ವರ್ಷದ ಬಾಲಕ ದೆಹಲಿಯಲ್ಲಿ10 ನೇ ತರಗತಿ ವಿದ್ಯಾರ್ಥಿ. ಕೊರೊನಾ ವೈರಸ್ ಲಾಕ್ ಡೌನ್ ಪರಿಣಾಮ ಮನೆಗೆ ಬಂದಿದ್ದ.
ತನ್ನ ತಾಯಿ ಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮನೆಗೊಂದು ಬೆಕ್ಕಿನ ಮರಿ ತರಲು ಹೇಳುತ್ತಿದ್ದ. ಆದರೆ ಬಾಲಕನ ಮಾತನ್ನು ತಾಯಿ ನಿರ್ಲಕ್ಷ ಮಾಡುತ್ತಿದ್ದರು. ಬಾಲಕ ಹಠ ಮಾಡಿದಾಗ ಚೀನಾದಲ್ಲಿ ಕೆಲಸ ಮಾಡುತ್ತಿರುವ ತಂದೆ ಬಂದ ಬಳಿಕ ತರುವ ಎಂದು ಹೇಳಿದ್ದರು.
(ಗಲ್ಫ್ ಕನ್ನಡಿಗ)ಆದರೆ ಬಾಲಕ ತಂದೆ ಬರುವವರೆಗೆ ಕಾಯಲು ಆಗುವುದಿಲ್ಲ. ಈಗಲೇ ಬೇಕು ಎಂದು ಹಠ ಹಿಡಿದಿದ್ದಾನೆ. ಆದರೆ ತಾಯಿ ಅದನ್ನು ನಿರ್ಲಕ್ಷ್ಯ ಮಾಡಿದರು. ಬೇಸರಗೊಂಡ ಬಾಲಕ ರೂಮಿಗೆ ಹೋಗಿ ಬಾಗಿಲು ಹಾಕಿ ಫ್ಯಾನಿಗೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
(ಗಲ್ಫ್ ಕನ್ನಡಿಗ)ಮಗ ನೇಣು ಹಾಕಿಕೊಂಡಿರುವ ವಿಚಾರ ತಾಯಿಗೆ ತಿಳಿದಿರಲಿಲ್ಲ. ಮರುದಿನ ಬೆಳಿಗ್ಗೆ ಜಿಮ್ ಟ್ರೈನರ್ ಹಾಗೂ ತಾಯಿ ರೂಮಿನ ಬಾಗಿಲು ಒಡೆದು ನೋಡಿದಾಗ ಬಾಲಕ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿರುವುದು ತಿಳಿದುಬಂದಿದೆ.
(ಗಲ್ಫ್ ಕನ್ನಡಿಗ)