ಸಭೆಯಲ್ಲಿ ಸಾಮಾಜಿಕ ಅಂತರ ಕಾಪಾಡಲು ಸಸಿಗಳ ಮೊರೆಹೋದ ಜಿ.ಪಂ. ಸಿಇಒ .....


ಸಭೆಯಲ್ಲಿ ಸಾಮಾಜಿಕ ಅಂತರ ಕಾಪಾಡಲು ಸಸಿಗಳ ಮೊರೆಹೋದ ಜಿ.ಪಂ. ಸಿಇಒ .....


ಕೊರೋನಾ ಮಟ್ಟಹಾಕಲು ಸರ್ಕಾರ ಸರ್ವ ಪ್ರಯತ್ನ ಮಾಡುತ್ತಿದೆ ಅದರಲ್ಲೂ ಸಾಮಾಜಿಕ ಅಂತರ ಕೂಡ ಮುಖ್ಯವಾಗಿದೆ.

ಇನ್ನೊಂದೆಡೆ ಸಚಿವರು, ಶಾಸಕರು ಅಲ್ಲದೆ ಹಿರಿಯ ಅಧಿಕಾರಿಗಳ  ಸಭೆಗಳಲ್ಲಿ ಎಷ್ಟೇ ಎಚ್ಚರ ವಹಿಸಿದ್ರೂ ಕೆಲವೊಮ್ಮೆ ಈ ಸಾಮಾಜಿಕ ಅಂತರ ಪಾಲನೆ ಮಾಡುವುದು ಸಾಧ್ಯವಾಗುತ್ತಿರಲಿಲ್ಲ. ಇದನ್ನ ಗಮನಿಸಿದ ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭ ಕಲ್ಯಾಣ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. 
 ತುಮಕೂರು ಜಿಲ್ಲಾ ಪಂಚಾಯ್ತಿ 2020-01 ನೇ ಸಾಲಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸುಂದರ ವಾತಾವರಣವನ್ನು ವಿವಿಧ ಜಾತಿಯ ಗಿಡಗಳನ್ನು ಬಳಸಿ ನಿರ್ಮಿಸಿದ್ದರು.
 ಕೊರೋನಾ ಸೋಂಕು ಹರಡುವಿಕೆ ಆರಂಭವಾದಂದಿನಿಂದಲೂ ಅಧಿಕಾರಿಗಳು ಹಗಲಿರಳು ಶ್ರಮವಹಿಸಿ ತಮ್ಮ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಾ ಇದ್ದಾರೆ. ಆಗಾಗ ಸಭೆಗಳನ್ನು ನಡೆಸಿ ಕೆಲಸ ಕಾರ್ಯಗಳ ವಿನಿಮಯದ ಪ್ರಕ್ರಿಯೆ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆಯುತಿತ್ತು. ಪ್ರತಿ ಭಾರಿ ಸಭೆ ಕರೆದಾಗ್ಲೂ ಆರಂಭದಲ್ಲಿ ಇದ್ದ ಸಾಮಾಜಿಕ ಅಂತರ ಮಾಯವಾಗುತ್ತಿತ್ತು.  ಸಭೆ ಮುಗಿದ ನಂತರ ಕೊರೋನಾ ಆತಂಕ ಮನೆ ಮಾಡುತ್ತಿತ್ತು. ಇದಕ್ಕೊಂದು ಪರಿಹಾರ ಕಂಡುಹಿಡಿದ  ಸಿಇಓ ಶುಭಕಲ್ಯಾಣ್, ಅಧಿಕಾರಿಗಳು ಕೂರುವ ಜಾಗದ ಕುರ್ಚಿಗಳನ್ನ ಅಂತರ ಕಾಪಾಡಿ, ನಡುವೆ ಗಿಡಗಳನ್ನ ಇರಿಸಿದರು. ಈ ಮೂಲಕ ಸಾಮಾಜಿಕ ಅಂತರವನ್ನು ಕಾಪಾಡಲು ವ್ಯವಸ್ಥೆ ಮಾಡಿದರು . ಒಂದು ಸಾಲಿನಲ್ಲಿ ನಾಲ್ವರು ಅಧಿಕಾರಿಗಳು ಮಾತ್ರ ಕುಳಿತುಕೊಳ್ಳುವಂತೆ  ವ್ಯವಸ್ಥೆ ಮಾಡಿದರು.
ಅಲ್ಲದೆ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಹಸಿರು  ಗಿಡಗಳು ನಳನಳಿಸಲು ಆರಂಭಿಸಿದವು. ಇನ್ನೊಂದೆಡೆ ಅಧಿಕಾರಿಗಳು ಸಹ ಭಯಮುಕ್ತರಾಗಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಸಭೆಯಲ್ಲಿ ಪಾಲ್ಗೊಂಡಿದ್ದೆ ಇವೆ ಎಂಬ  ವಿಶ್ವಾಸ ಮೂಡಿತ್ತು.