-->
ಅಗಲಿದ ಬಸ್ ನಿರ್ವಾಹಕನ ಕುಟುಂಬಕ್ಕೆ ರಾಣಿ ಅಬ್ಬಕ್ಕ ಬಸ್ ನೌಕರರ ಸಂಘದಿಂದ ಆರ್ಥಿಕ ನೆರವು

ಅಗಲಿದ ಬಸ್ ನಿರ್ವಾಹಕನ ಕುಟುಂಬಕ್ಕೆ ರಾಣಿ ಅಬ್ಬಕ್ಕ ಬಸ್ ನೌಕರರ ಸಂಘದಿಂದ ಆರ್ಥಿಕ ನೆರವು

 

ದೇರಳಕಟ್ಟೆ : ಇತ್ತೀಚೆಗೆ ಅನಾರೋಗ್ಯದ ಕಾರಣ ನಿಧನರಾದ ಖಾಸಗಿ ಬಸ್ ನಿರ್ವಾಹಕ ಮನೋಜ್ ಕುತ್ತಾರ್ ಅವರ ಮನೆಗೆ ಭೇಟಿ ನೀಡಿದ ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘ, ಪೂರ್ವ ವಲಯ, ದೇರಳಕಟ್ಟೆ ಇದರ ನಿಯೋಗ ಮೃತರ ಪತ್ನಿ ಮತ್ತು ಕುಟುಂಬದವರಿಗೆ ಸಾಂತ್ವಾನ ಹೇಳಿ ಆರ್ಥಿಕ ನೆರವನ್ನು ನೀಡಿತು. ಈ ಸಂದರ್ಭ ಮಾತನಾಡಿದ ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ಗೌರವಾಧ್ಯಕ್ಷ ಮುನೀರ್ ಕಾಟಿಪಳ್ಳ ಲಾಕ್‌ಡೌನ್ ಅವಧಿಯಲ್ಲಿ ಜಿಲ್ಲೆಯ ಬಸ್ಸು ನೌಕರರು ಎದುರಿಸಿದ ಆರ್ಥಿಕ ಮತ್ತು ಉದ್ಯೋಗದ ಸಮಸ್ಯೆಗಳ ಸಮಯದಲ್ಲಿ ಬಸ್ಸು ನೌಕರರು ಸಂಘಟಿತರಾಗಬೇಕೆಂಬ ಉದ್ದೇಶದಿಂದ ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘವನ್ನು ಸ್ಥಾಪಿಸಲಾಯಿತು. ಸಂಘವು ಬಸ್ಸು ನೌಕರರ ಸಮಸ್ಯೆಗಳಿಗೆ ಸ್ಪಂದಿಸಲಿದ್ದು ಸಂಘದ ವತಿಯಿಂದ ಇತ್ತೀಚೆಗೆ ಅನಾರೋಗ್ಯದ ಕಾರಣ ನಿಧನರಾದ ಖಾಸಗಿ ಬಸ್ ನಿರ್ವಾಹಕ ಮನೋಜ್ ಕುತ್ತಾರ್‌ರವರಿಗೆ ಆರ್ಥಿಕ ನೆರವನ್ನು ನೀಡಲಾಗಿದ್ದು ಸಂಘವು ಮುಂದಿನ ದಿನಗಳಲ್ಲೂ ಮನೋಜ್ ಕುಟುಂಬದ ಜೊತೆ ನಿಲ್ಲಲಿದೆ ಎಂದು ಹೇಳಿದರು.

ನಿಯೋಗದಲ್ಲಿ ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ಅಧ್ಯಕ್ಷ ಅಲ್ತಾಫ್ ಮುಡಿಪು,ಕಾರ್ಯದರ್ಶಿ ಜಗದೀಶ್,ಉಪಾಧ್ಯಕ್ಷ ಬಾಜಿಕ್,ದಿವಾಕರ್,ನಝೀರ್ ಡಿವೈಎಫ್‌ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೆ.ಸಿ ರೋಡ್,ದೇರಳಕಟ್ಟೆ ಘಟಕದ ಅಧ್ಯಕ್ಷ ನವಾಜ್ ಉರುಮನೆ,ಜಿಲ್ಲಾ ಮುಖಂಡ ರಫೀಕ್ ಹರೇಕಳ,ಕಾರ್ಮಿಕ ಮುಂದಾಳು ಇಬ್ರಾಹಿಂ ಮದಕ,ರಾಹುಲ್ ಉಪಸ್ಥಿತರಿದ್ದರು.

Ads on article

Advertise in articles 1

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Support Us- Pay Rs 101

  

advertising articles 2

Advertise under the article

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Support Us-Pay Rs 101