ಜನರಿಗೀಗ ಭಯ ಕೊರೋನಾದ ಮೇಲಲ್ಲ ಆಸ್ಪತ್ರೆಯ ಮೇಲೆ. ಬಿ.ಕೆ ಇಮ್ತಿಯಾಜ್
Thursday, August 20, 2020
ಕೊರೊನಾ ರೋಗ ವಿರುದ್ದ ಹೋರಾಡಲು ಕರೆ ಕೊಟ್ಟ ನಮ್ಮನ್ನಾಳುವ ಸರಕಾರ ಪ್ರಾರಂಭದ ಹಂತದಿಂದ ಈವರೆಗೆ ಕೈಗೊಂಡ ಎಲ್ಲಾ ಕ್ರಮಗಳು ವೈಫಲ್ಯಗೊಂಡಿದೆ. ಸೊಂಕಿತರನ್ನು ಪತ್ತೆ ಹಚ್ಚುವಲ್ಲಿ ಮತ್ತದು ಸಮುದಾಯಕ್ಕೆ ಹರಡದಂತೆ ನೋಡಿಕೊಳ್ಳುವಲ್ಲಿ ಈವರೆಗೆ ಸಾದ್ಯವಾಗಿಲ್ಲ ಅದೇ ರೀತಿ ಸೋಂಕಿರಿಗೆ ಗುಣಮಟ್ಟದ ಚಿಕಿತ್ಸೆಕೊಡಲು ಸಾದ್ಯವಾಗದೆ ಜನ ಸಾಯುವ ಪರಿಸ್ಥಿತಿ ನಿರ್ಮಾಣಗೊಂಡಿದೆ ನಮ್ಮ ಜಿಲ್ಲೆಯಲ್ಲೇ ದಿನವೊಂದಕ್ಕೆ ಸರಸಾರಿ 8 ರಿಂದ 10 ಜನ ಮರಣಹೊಂದುತ್ತಿದ್ದಾರೆ. ಇದು ಜಗತ್ತಿನಲ್ಲಿ ಕೊರೊನಾದಿಂದ ಮರಣಹೊಂದುವ ಸರಾಸರಿ ಪ್ರಮಾಣಕ್ಕಿಂತಲೂ ಜಾಸ್ತಿ. ಸರಕಾರಿಆಸ್ಪತ್ರೆಯ ವೈಫಲ್ಯತೆ ಇಂದು ಖಾಸಗೀ ಆಸ್ಪತ್ರೆಗಳಿಗೆ ಲಾಭ ತಂದೊಡ್ಡಿದೆ. ಕೊರೊನ ಹೆಸರಲ್ಲಿ ಖಾಸಗೀ ಆಸ್ಪತ್ರೆಗಳು ದುಬಾರಿ ಚಿಕಿತ್ಸಾ ವೆಚ್ಚವನ್ನು ವಸೂಲಿಮಾಡುವ, ಇನ್ನೂರು ಮುನ್ನೂರು ಮುಖಬೆಲೆಯ ಪಿಪಿಇ ಕಿಟ್ ಗಳಿಗೆ ಸಾವಿರಾರು ರೂಪಾಯಿಗಳನ್ನು ಭರಿಸುವ ವ್ಯವಸ್ಥೆ ಜನಸಾಮಾನ್ಯರನ್ನು ಮತ್ತಷ್ಟು ಭೀತಿಗೊಳಪಡಿಸಿದೆ. ಡಿವೈಎಫ್ಐ ಖಾಸಗೀ ಆಸ್ಪತ್ರೆ ಚಿಕಿತ್ಸೆ ಹೆಸರಲ್ಲಿ ರೋಗಿಗಳನ್ನು ಲೂಟಿಮಾಡುವ ನಿರ್ಲಜ್ಜ ನೀತಿಯನ್ನು ವಿರೋಧಿಸಿ ಅದೇ ರೀತಿ ಎಲ್ಲಾ ಸರಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿ ಪಡಿಸಲು, ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಪ್ರಾರಂಭಿಸಲು ಎಲ್ಲರಿಗೂ ಗುಣಮಟ್ಟದ ಉಚಿತ ಚಿಕಿತ್ಸೆ ನೀಡಲು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ ಎಂದು ಡಿವೈಎಫ್ಐ ಜಿಲ್ಲಾ ಅದ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಇಂದು ಪಕ್ಕಲಡ್ಕದಲ್ಲಿ ಡಿವೈಎಫ್ಐ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಡಿವೈಎಫ್ಐ ಜಿಲ್ಲಾ ಮುಖಂಡರಾದ ಅಶ್ರಫ್ ಕೆಸಿರೋಡ್, ಜೆ.ಎಮ್.ಎಸ್ ಮುಖಂಡರು ಮಾಜಿ ಕಾರ್ಪೊರೇಟರ್, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಫೈರೋಜ್ ಪಕ್ಕಲಡ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ವೇಳೆ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸ್ಥಳೀಯ ಡಿವೈಎಫ್ಐ ಮುಖಂಡರಾದ ದೀಪಕ್ ಬೊಲ್ಲ, ಧಿರಾಜ್ ಅಂಚನ್ , ವರಪ್ರಸಾದ್, ಜಗದೀಶ್ ಕುಲಾಲ್, ಲೋಕೇಶ್ ಎಂ, ನಾಗರಾಜ್ ಬಜಾಲ್, ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.