ವೃದ್ಧೆಗೆ ಸಹಾಯ ಮಾಡುವ ನೆಪದಲ್ಲಿ ಚಿನ್ನಾಭರಣ ದೋಚಿದ್ದ ರಿಕ್ಷಾ ಚಾಲಕ: 4.32 ಲಕ್ಷ ರೂ ಮೌಲ್ಯದ ಬಂಗಾರ ಸಹಿತ ಬಂಧನ
Thursday, August 20, 2020
(ಗಲ್ಫ್ ಕನ್ನಡಿಗ)ಮಂಗಳೂರು: ವೃದ್ಧೆಯೊಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ ಚಿನ್ನಾಭರಣ ದೋಚಿದ್ದ ರಿಕ್ಷಾ ಚಾಲಕನೊಬ್ಬನನ್ನು
ಉರ್ವ ಪೊಲೀಸರು ಬುಧವಾರ ಬಂಧಿಸಿದ್ದಾರೆ.
(ಗಲ್ಫ್ ಕನ್ನಡಿಗ)ಬಂಧಿತನನ್ನು ಶಕ್ತಿನಗರ ನಿವಾಸಿ ಪ್ರವೀಣ್ ರಾಮನಾಯ್ಕ (40) ಎಂದು ಪೊಲೀಸರು ತಿಳಿಸಿದ್ದಾರೆ.
ಈತನ ಬಳಿ ಇದ್ದ ಸುಮಾರು 4.32 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
(ಗಲ್ಫ್ ಕನ್ನಡಿಗ)ಆರೋಪಿ ಪ್ರವೀಣ ರಾಮನಾಯ್ಕ ಜೂನ್ 7ರಂದು ಚಿಲಿಂಬಿಯ ದೇವಸ್ಥಾನವೊಂದರ ಬಳಿ ವೃದ್ಧೆಯೊಬ್ಬರಿಗೆ
ಸಹಾಯ ಮಾಡುವ ನೆಪದಲ್ಲಿ ಅವರ ಬಳಿ ಇದ್ದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದ. ಈ ಸಂಬಂಧ ವೃದ್ಧೆ ಉರ್ವ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
(ಗಲ್ಫ್ ಕನ್ನಡಿಗ)ಪ್ರಕರಣ ಸಂಬಂಧ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸ್ ತಂಡ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
(ಗಲ್ಫ್ ಕನ್ನಡಿಗ)ಬಳಿಕ ಈತನನ್ನು ವಿಚಾರಣೆಗೆ ಒಳಪಡಿಸಿದಾಗ ವೃದ್ಧೆಯಿಂದ ದೋಚಿದ್ದ ಚಿನ್ನಾಭರಣವನ್ನು ಫಳ್ನೀರ್‌ನ ಬ್ಯಾಂಕ್‌ವೊಂದರಲ್ಲಿ ಅಡಮಾನ ಇರಿಸಿರುವುದಾಗಿ ಮಾಹಿತಿ ನೀಡಿದ್ದ. ಆತನ ಮಾಹಿತಿಯಂತೆ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ಗಲ್ಫ್ ಕನ್ನಡಿಗ)ಉರ್ವ ಠಾಣೆಯ ಪೊಲೀಸ್ ನಿರೀಕ್ಷಕ ಮುಹಮ್ಮದ್ ಶರೀಫ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ಸೈ ಶ್ರೀಕಲಾ, ಎಎಸ್ಸೈ ಬಾಲಕೃಷ್ಣ, ಸಿಬ್ಬಂದಿಯಾದ ಪ್ರಕಾಶ್, ಬಸವರಾಜ್ ಬಿರಾದಾರ್ ಪಾಲ್ಗೊಂಡಿದ್ದರು.
(ಗಲ್ಫ್ ಕನ್ನಡಿಗ)