ಮಂಗಳೂರು ಏರ್ ಪೋರ್ಟ್ ಗೆ ಹುಸಿಬಾಂಬ್ ಪ್ರಕರಣ; ಆರೋಪಿ ಬಂಧನ
Thursday, August 20, 2020
(ಗಲ್ಫ್ ಕನ್ನಡಿಗ)ಮಂಗಳೂರು; ನಿನ್ನೆ ಮಧ್ಯಾಹ್ನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿಬಾಂಬ್ ಕರೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
(ಗಲ್ಫ್ ಕನ್ನಡಿಗ)ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುರಾಡಿಯ ವಸಂತ (33) ಬಂಧಿತ ಆರೋಪಿ
(ಗಲ್ಫ್ ಕನ್ನಡಿಗ)ಆರೋಪಿ ವಸಂತ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು ವಶಕ್ಕೆ ಪಡೆದಿದ್ದ ಆತನನ್ನು ತೀವ್ರ ವಿಚಾರಣೆ ಬಳಿಕ ತಡರಾತ್ರಿ ಬಂಧಿಸಲಾಗಿದೆ.
(ಗಲ್ಫ್ ಕನ್ನಡಿಗ)ನಿನ್ನೆ ಮಧ್ಯಾಹ್ನ ಆತ ಮಂಗಳೂರು ವಿಮಾನ ನಿಲ್ದಾಣದ ಮಾಜಿ ನಿರ್ದೇಶಕರಿಗೆ ಸಂದೇಶ ಮತ್ತು ಕರೆ ಕಳುಹಿಸಿ ಬಾಂಬ್ ಬೆದರಿಕೆ ಹಾಕಿದ್ದ. ವಿಮಾನ ನಿಲ್ದಾಣ ತಪಾಸಣೆ ಬಳಿಕ ಅದು ಹುಸಿ ಕರೆ ಎಂದು ದೃಢಪಟ್ಟಿತ್ತು. ಘಟನೆ ಹಿನ್ನೆಲೆಯಲ್ಲಿ ಆರೋಪಿಯನ್ನು ನಿನ್ನೆ ಸಂಜೆ ವೇಳೆಗೆ ವಶಕ್ಕೆ ಪಡೆದುಕೊಂಡಿದ್ದರು
(ಗಲ್ಫ್ ಕನ್ನಡಿಗ)