
ಕೆಸಿಎಫ್ ಯುಎಇ ವತಿಯಿಂದ ಯಶಸ್ವೀ ರಕ್ತದಾನ ಶಿಬಿರ
Thursday, August 20, 2020
“ಮಾನವೀಯ ಸೇವೆಗಾಗಿ ಕೆಸಿಎಫ್ ಸದಾ ನಿಮ್ಮೊಂದಿಗೆ” ಎಂಬ ಘೇಷಣೆಯಡಿಯಲ್ಲಿ ಕೆಸಿಎಫ್ ಯುಎಇ ಯ ಎರಡನೇ ರಕ್ತದಾನ ಶಿಬಿರವು 07 ಆಗಸ್ಟ್ 2020 ರಂದು ದುಬೈ ಯ ಲತೀಫಾ ರಕ್ತದಾನ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಯಿತು. ಶಿಬಿರದಲ್ಲಿ ದುಬೈ, ಶಾರ್ಜಾ ಮತ್ತು ಅಜ್ಮಾನ್ ನಿಂದ 265 ರಕ್ತದಾನಿಗಳು ಭಾಗವಹಿಸಿದ್ದರು. ಶಿಬಿರದಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ನಾಯಕರು, ಸಾಮಾಜಿಕ ನಾಯಕರು ಉಪಸ್ಥಿತರಿದ್ದರು.
ಶ್ರೀ ತಾರನಾಥ್ ರೈ ಸಿಇಒ ಅಲ್ ಫರ್ದಾನ್ ಎಕ್ಸೆಂಜ್, ಶ್ರೀ ಜಯಕರ್ ರೈ, ತುಳು ಒಕ್ಕೂಟ ದುಬೈ, ಮೊಹಮ್ಮದ್ ಅಶ್ರಫ್ ಮ್ಯಾನೇಜರ್ ಮೆಗಾ ಸ್ಟಾರ್ ಜ್ಯುವೆಲ್ಲರ್ಸ್, ಶ್ರೀ ಫ್ಲಾಯ್ಡ್ ಕಿರಣ್ ನ್ಯೂಸ್ ಕರ್ನಾಟಕ ಮೊದಲಾದವರು ರಕ್ತದಾನದಲ್ಲಿ ಪಾಲ್ಗೊಂಡಿದ್ದರು
2020 ರ ಜುಲೈ ತಿಂಗಳಲ್ಲಿ ಕೆಸಿಎಫ್ ಅಬುಧಾಬಿ ವಲಯವು ಇದೇ ಘೋಷಣೆಯಡಿಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ಕೆಸಿಎಫ್ ಅಬುಧಾಬಿ ಝೋನ್ ಅಧ್ಯಕ್ಷರಾದ ಹಸೈನಾರ್ ಅಮಾನಿ ಅಜ್ಜಾವರ ಕೆಸಿಎಫ್ ಅಂತರಾಷ್ಟ್ರೀಯ ಮುಖಂಡರಾದ ಜನಾಬ್ ಪಿಎಂಹೆಚ್ ಹಮೀದ್ ಈಶ್ವರಮಂಗಲ, ಜನಾಬ್ ಹಮೀದ್ ಸಆದಿ ಈಶ್ವರಮಂಗಲ ಸೇರಿದಂತೆ 105 ಕ್ಕೂ ಹೆಚ್ಚು ದಾನಿಗಳು ರಕ್ತದಾನ ಶಿಬಿರದಲ್ಲಿ ಸೇರಿಕೊಂಡರು. ಇಂಡಿಯನ್ ಸೋಶಿಯಲ್ ಸೆಂಟರ್ ಅಧ್ಯಕ್ಷರಾದ ಶ್ರೀ ಯೋಗೇಶ್ ಪ್ರಭು ಅವರು ಸ್ಥಳಕ್ಕೆ ಭೇಟಿ ನೀಡಿ ಕೆಸಿಎಫ್ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ಬ್ರೈಟ್ ಮಾರ್ಬಲ್ ಅಬುಧಾಬಿ ಹಾಗೂ ಫ್ಯೂಚರ್ ಮೈಂಡ್ ಇದರ ಪ್ರಾಯೋಜಕತ್ವ ವಹಿಸಿಕೊಂಡಿತ್ತು.
ಅಲ್ ಮಜ್ಹರ್ ಮೆಟಲ್ ಎಲೆಕ್ಟ್ರೋಪ್ಲೇಟಿಂಗ್ ಕಂಪೆನಿ ಶಾರ್ಜಾ ಇದರ ಮಾಲೀಕ ಅಬ್ದುಲ್ ಸಮದ್, ಬಹರ್ ಅಲ್ ನೂರ್ ರೆಸ್ಟೋರೆಂಟ್ ಅಲ್`ಕಿಸೈಸ್ ಇದರ ಮಾಲೀಕರು, ಅಲ್ ರಬಿಹಾ ಗ್ರೂಪ್ ಮಾಲಿಕ ಜನಾಬ್ ಇಕ್ಬಾಲ್ ಸಿದ್ದಕಟ್ಟೆ , ಅಲ್ ಬುರಾಕ್ ಸರ್ವೀಸಸ್ ಮಾಲಿಕ ಅಬ್ದುಲ್ ಖಾದರ್ ಸಾಲೆತ್ತೂರ್, ಅಬ್ದುಲ್ ಲತೀಫ್ ತಿಂಗಲಾಡಿ ದುಬೈಯಲ್ಲಿ ನಡೆದ ರಕ್ತದಾನ ಶಿಬಿರದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದರು.
ಕೆಸಿಎಫ್ ಯುಎಇ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ, ಕೆಸಿಎಫ್ ಯುಎಇ ಜನರಲ್ ಸೆಕ್ರೆಟರಿ ಮೂಸಾ ಹಾಜಿ ಬಸರ, ಕೆಸಿಎಫ್ ಯುಎಇ ಸಾಂತ್ವನ ವಿಭಾಗದ ಅಧ್ಯಕ್ಷ ಝೈನುದ್ದೀನ್ ಹಾಜಿ ಬೆಳ್ಳಾರೆ, ಕೆಸಿಎಫ್ ಯುಎಇ ಬ್ಲಡ್ ಸೈಬೋ ಅಧ್ಯಕ್ಷ ನವಾಝ್ ಹಾಜಿ ಕೋಟೆಕಾರ್ ಮತ್ತು ಕೋ-ಆರ್ಡಿನೇಟರ್ಗಳಾದ ರಿಫಾಯ್ ಗೂನಡ್ಕ ಮತ್ತು ರಫೀಕ್ ಮುಲ್ಕಿ ಪ್ರಾಯೋಜಕರನ್ನು ಹಾಗೂ ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಡಿಎಚ್‌ಎ (ದುಬೈ ಹೆಲ್ತ್ ಅಥಾರಿಟಿ) ಬ್ಲಡ್ ಬ್ಯಾಂಕನ್ನು ಬೆಂಬಲಿಸಿ ರಕ್ತದಾನ ಶಿಭಿರವನ್ನು ಮುಂದೆಯೂ ನಡೆಸಲಾಗುವುದು ಎಂದು ಕೆಸಿಎಫ್ ನಾಯಕರು ತಿಳಿಸಿದರು.