ಬಿಜೆಪಿ ಶಾಸಕ ಹರೀಶ್ ಪೂಂಜಾ ಗೆ ಕೊರೊನಾ ಪಾಸಿಟಿವ್

ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

(ಗಲ್ಫ್ ಕನ್ನಡಿಗ) ಮಂಗಳೂರು; ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾಗೆ ಇಂದು ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

(ಗಲ್ಫ್ ಕನ್ನಡಿಗ) ಇತ್ತೀಚೆಗೆ ಕೊರೊನಾ ದೃಢಪಟ್ಟ ಮುಖ್ಯಮಂತ್ರಿಗಳ ಜೊತೆ ಸಂಪರ್ಕದಲ್ಲಿದ್ದ ಹರೀಶ್ ಪೂಂಜಾ ಅವರಿಗೆ ಕೊರೊನಾ ಪಾಸಿಟಿವ್ ಆಗಿದ್ದು ಮನೆಯಲ್ಲಿಯೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹರೀಶ್ ಪೂಂಜಾಗೆ ಸಣ್ಣ ಮಟ್ಟಿನ ಜ್ವರ ಇದ್ದ ಕಾರಣ ಕೊರೊನಾ ಟೆಸ್ಟ್ ಮಾಡಿಸಿದ್ದು ಪಾಸಿಟಿವ್ ಎಂದು ವರದಿ ಬಂದಿದೆ. ಸಣ್ಣ ಮಟ್ಟಿನ ಜ್ವರ ಹೊರತುಪಡಿಸಿ ಬೇರೆ ಯಾವುದೇ ಲಕ್ಷಣ ಇಲ್ಲದಿರುವುದರಿಂದ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.(ಗಲ್ಫ್ ಕನ್ನಡಿಗ) ಅವರು ಟ್ವೀಟ್ ಈ ರೀತಿಯಾಗಿ ಮಾಡಿದ್ದಾರೆ.
ಸಣ್ಣ ಮಟ್ಟಿನ ಜ್ವರ ಇದ್ದ ಕಾರಣ ಮಾಡಿಸಿದ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ವರದಿ ಬಂದಿದೆ. ಸಣ್ಣಮಟ್ಟಿನ ಜ್ವರ ಬಿಟ್ಟು ಬೇರೆ ಯಾವುದೇ ಲಕ್ಷಣಗಳಿಲ್ಲದೆ ಇರುವುದರಿಂದ ಮನೆಯಲ್ಲಿಯೇ ಶುಶ್ರೂಷೆ ಪಡೆಯುತ್ತಿದ್ದೇನೆ. ಕಳೆದ ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು, ಕ್ವಾರಂಟೈನ್ ನಲ್ಲಿದ್ದು ಮುಂಜಾಗ್ರತೆವಹಿಸಿ ಎಂದು ಕೋರುತ್ತೇನೆ.

(ಗಲ್ಫ್ ಕನ್ನಡಿಗ)