ವಸತಿ ಯೋಜನೆಗಳಿಗೆ ಅನುದಾನ -ತಾ.ಪಂ. ಅಧ್ಯಕ್ಷರ ಮನವಿ
Wednesday, August 5, 2020
(ಗಲ್ಫ್ ಕನ್ನಡಿಗ)ಮಂಗಳೂರು:-ಮಂಗಳೂರು ತಾಲೂಕಿನ ಗ್ರಾಮ ಪಂಚಾಯತ್‍ಗಳ ವಾಪ್ತಿಯಲ್ಲಿ ಬಸವ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಸಕಾಲದಲ್ಲಿ ಅನುದಾನ ಬಿಡುಗಡೆಯಾಗಿರುವುದಿಲ್ಲ.
(ಗಲ್ಫ್ ಕನ್ನಡಿಗ) ಪುನರ್ ವಸತಿ ಯೋಜನೆ ಪ್ರಗತಿಯಲ್ಲಿರುವ ಮನೆಗಳಿಗೆ ಅನುದಾನ ಬಿಡುಗಡೆ ರೂ. 5 ಲಕ್ಷ ಘೋಷಣೆಯಾಗಿದ್ದು, ಈಗಾಗಲೇ ರೂ. 1 ಲಕ್ಷ ಅನುದಾನ ಬಿಡುಗಡೆಯಾಗಿದೆ.
ಬಸವ ವಸತಿ ಯೋಜನೆಯಡಿಯಲ್ಲಿ ಮನೆಗಳ ಗುರಿ ನಿಗದಿ ಪಡಿಸದೇ ಇರುವುದರಿಂದ ಪ್ರಸಕ್ತ ವರ್ಷಗಳ ಹೊಸ ಮನೆಗಳ ಗುರಿ ನಿಗದಿಪಡಿಸಿ ಫಲಾನುಭವಿಗಳಿಗೆ ಯೋಜನೆ ಸಿಗುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಅದೇ ರೀತಿ ಪಿಂಚಣಿ ಯೋಜನೆಗಳಿಗೂ ನಿಗದಿತ ಅವಧಿಯಲ್ಲಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಮನವಿ ಮಾಡಿದ್ದಾರೆ.