ಭಾರಿ ಮಳೆ: ಧರ್ಮಸ್ಥಳ ಸ್ನಾನಘಟ್ಟ ಮುಳುಗುವ ಭೀತಿ (video)
Thursday, August 6, 2020
(ಗಲ್ಫ್ ಕನ್ನಡಿಗ)ಮಂಗಳೂರು; ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಧರ್ಮಸ್ಥಳದ ಸ್ನಾನಘಟ್ಟದಲ್ಲಿ ನದಿ ನೀರು ತುಂಬಿ ಹರಿಯುತ್ತಿದೆ.
(ಗಲ್ಫ್ ಕನ್ನಡಿಗ)ಧರ್ಮಸ್ಥಳ ಸ್ನಾನಘಟ್ಟ ಮುಳುಗುವ ಭೀತಿಯಲ್ಲಿದ್ದು ಅಪಾಯದ ಮಟ್ಟ ತಲುಪಿದೆ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಭಕ್ತರು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ಪವಿತ್ರ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಾರೆ.
(ಗಲ್ಫ್ ಕನ್ನಡಿಗ)ಭಾರಿ ಮಳೆಗೆ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು ಧರ್ಮಸ್ಥಳ ಸ್ನಾನಘಟ್ಟದಲ್ಲಿ ನೀರು ಮೇಲೆ ಬಂದಿದೆ. ಇನ್ನಷ್ಟು ಬಿರುಸಿನ ಮಳೆಯಾದರೆ ಧರ್ಮಸ್ಥಳ ಸ್ನಾನಘಟ್ಟ ಮುಳುಗುವ ಸಾಧ್ಯತೆ ಇದೆ.
(ಗಲ್ಫ್ ಕನ್ನಡಿಗ) ಕಳೆದ ಬಾರಿ ಕೂಡ ಭಾರಿ ಮಳೆಗೆ ಧರ್ಮಸ್ಥಳ ಸ್ನಾನಘಟ್ಟ ಮುಳುಗಿತ್ತು. ಈ ಬಾರಿ ಮತ್ತೆ ಪುನಾರವರ್ತನೆ ಆಗುವ ಭೀತಿ ಎದುರಾಗಿದೆ.
(ಗಲ್ಫ್ ಕನ್ನಡಿಗ)