
ಬಿಜೆಪಿ ಸೇರಲು ದಾದಾ ಒಲವು: ಕಮಲ ಪಕ್ಷದತ್ತ ಸೌರವ್ ಗಂಗೂಲಿ?
ಕೋಲ್ಕತ: ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಲ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕ್ಷಿಪ್ರ ಗತಿಯ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಈ ಮಧ್ಯೆ, ಬಿಸಿಸಿಐ ಅಧ್ಯಕ್ಷ, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಬಿಜೆಪಿ ಕಡೆ ಒಲವು ತೋರಿಸಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದೇ ವೇಳೆ, ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಲ ಸರಕಾರ ತನಗೆ ನೀಡಿದ್ದ 2 ಎಕರೆ ಜಾಗವನ್ನು ಸೌರವ್ ಗಂಗೂಲಿ ವಾಪಸ್ ನೀಡಿದ್ದಾರೆ. ಶನಿವಾರ ನಡೆದಿರುವ ಈ ಬೆಳವಣಿಗೆಯಿಂದ, ಈಗಾಗಲೇ ಹಬ್ಬಿರುವ ವದಂತಿಗಳಿಗೆ ರೆಕ್ಕೆ ಪುಕ್ಕ ಸಿಕ್ಕಂತಾಗಿದೆ.
ಸೌರವ್ ಕಮಲ ಪಾಳಯ ಸೇರಿದಂತೆ ರಾಜ್ಯ ಬಿಜೆಪಿಯ ನೇತೃತ್ವ ವಹಿಸುವ ಸಾಧ್ಯತೆ ಇದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಗಂಗೂಲಿ ಎಜುಕೇಶನಲ್ ಆ್ಯಂಡ್ ವೆಲ್‌ಫೇರ್ ಸೊಸೈಟಿಗೆ ಬಂಗಾಲದ ಗೃಹಮಂಡಳಿ 2 ಎಕರೆ ಜಾಗ ವನ್ನು ಕೋಲ್ಕತದ ಪೂರ್ವಭಾಗದಲ್ಲಿ ನೀಡಿತ್ತು. ಐಸಿ ಎಸ್‌ಇ ಆಧಾರಿತ 12ನೇ ತರಗತಿವರೆಗಿನ ಶಾಲೆಯನ್ನು ಇಲ್ಲಿ ತೆರೆಯಲು ಗಂಗೂಲಿ ಹೊರಟಿದ್ದರು. ಆದರೆ ದಿಢೀರ್ ಬೆಳವಣಿಗೆಯಲ್ಲಿ ಸರಕಾರಕ್ಕೆ ಪತ್ರ ಬರೆದಿ ರುವ ಗಂಗೂಲಿ ಎಜುಕೇಶನಲ್ ಆ್ಯಂಡ್ ವೆಲ್‌ಫೇರ್ ಸೊಸೈಟಿ, ಜಮೀನನ್ನು ಹಿಂಪಡೆಯಲು ಮನವಿ ಮಾಡಿದೆ. ಅದನ್ನು ಅಲ್ಲಿನ ಸರಕಾರ ಅಂಗೀಕರಿಸಿದೆ. ಕಾನೂನು ತೊಂದರೆ ಯಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ಕೆಲ ಮೂಲಗಳು ಹೇಳಿವೆ.