ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಗೆ ಕೊರೊನಾ ಪಾಸಿಟಿವ್- ಆ.1 ರಂದು ಐವನ್ ಸಂಪರ್ಕದಲ್ಲಿದ್ದ ಡಿಕೆಶಿ!

(ಗಲ್ಫ್ ಕನ್ನಡಿಗ)ಬೆಂಗಳೂರು;  ಕೊರೊನಾ ವೈರಸ್ ನ ನಡುವೆಯು ರಾಜ್ಯಾದ್ಯಂತ ಸುತ್ತಾಡುತ್ತಿದ್ದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

(ಗಲ್ಫ್ ಕನ್ನಡಿಗ)ಇಂದು ಅವರಿಗೆ ಕೊರೊನಾ ದೃಢಗೊಂಡಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಕೊರೊನಾ ಅಂಟಿಕೊಂಡಿದ್ದು ಗುಣಮುಖರಾಗಿದ್ದರು.


(ಗಲ್ಫ್ ಕನ್ನಡಿಗ)ಕೊರೊನಾ‌ ಮಹಾಮಾರಿ ನಡುವೆ ಕೊರೊನಾ ನಿರ್ವಹಣೆಯಲ್ಲಿ ಭ್ರಷ್ಟಾಚಾರ ವಾಗಿದೆ ಎಂದು ಅವರು ರಾಜ್ಯಾದ್ಯಂತ ಪ್ರವಾಸ ಮಾಡಿದ್ದರು.


(ಗಲ್ಫ್ ಕನ್ನಡಿಗ)ಎರಡು ದಿನಗಳ ಪ್ರವಾಸಕ್ಕೆ ಜುಲೈ 31 ರಂದು ಮಂಗಳೂರಿಗೆ ಬಂದಿದ್ದ ಅವರು ಮರುದಿನ ಕೊರೊನಾ ದೃಢಪಟ್ಟ ಐವನ್ ಡಿಸೋಜ ಸಂಪರ್ಕದಲ್ಲಿದ್ದರು. ಆ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್ ಅವರಿಗೆ ಕೊರೊನಾ ಭೀತಿ ಎದುರಾಗಿತ್ತು.