
ಕೊಯಿಕ್ಕೋಡು ವಿಮಾನ ದುರಂತದ ಬೆನ್ನಿಗೆ ಕೊರೊನಾ ಶಾಕ್; ರಕ್ಷಣಾ ಕಾರ್ಯಚರಣೆಯಲ್ಲಿದ್ದವರಿಗೆ ಕ್ವಾರಂಟೈನ್
Saturday, August 8, 2020
(ಗಲ್ಫ್ ಕನ್ನಡಿಗ) ಕೋಯಿಕ್ಕೋಡ್ :ಕೇರಳದ ಕೋಯಿಕ್ಕೋಡ್ ನಲ್ಲಿ ನಿನ್ನೆ ನಡೆದ ವಿಮಾನ ದುರಂತದ ಬೆನ್ನಿಗೆ ರಕ್ಷಣಾ ಕಾರ್ಯದಲ್ಲಿದ್ದ ಸಿಬ್ಬಂದಿಗೆ ಕೊರೊನಾ ಶಾಕ್ ನೀಡಿದೆ.
(ಗಲ್ಫ್ ಕನ್ನಡಿಗ)ಕೊಯಿಕ್ಕೋಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾತ್ರಿ ನಡೆದ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರ ಪೈಕಿ ಒಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
(ಗಲ್ಫ್ ಕನ್ನಡಿಗ)ವಿಮಾನದಲ್ಲಿ ಪ್ರಯಾಣಿಸಿದ ಎಲ್ಲರಿಗೂ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಮೃತಪಟ್ಟ ಓರ್ವ ನಲ್ಲಿ ಕೊರೊನಾ ಸೋಂಕು ಇರುವುದರಿಂದ ರಕ್ಷಣಾ ಕಾರ್ಯದಲ್ಲಿದ್ದವರಿಗೆ ಕೊರೊನಾ ಭೀತಿ ಎದುರಾಗಿದೆ.
ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಎಲ್ಲ ಸಿಬ್ಬಂದಿಯನ್ನೂ ಕ್ವಾರಂಟೈನ್ಗೆ ಒಳಗಾಗುವಂತೆ ಸೂಚಿಸಿದ್ದಾರೆ.