-->

ಭತ್ತದ ಬೆಳೆಗೆ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ

ಭತ್ತದ ಬೆಳೆಗೆ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ


(ಗಲ್ಪ್ ಕನ್ನಡಿಗ)ಮಂಗಳೂರು :- ಕರ್ನಾಟಕರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಮುಖ್ಯ ಬೆಳೆಯಾದ ಮಳೆಯಾಶ್ರಿತ ಭತ್ತವನ್ನು ಗ್ರಾಮ ಪಂಚಾಯತ್ ಮಟ್ಟಕ್ಕೆ ಬೆಳೆ ವಿಮೆ ಯೋಜನೆಯಡಿ ನೋಂದಣೆಗೆ ಆಗಸ್ಟ್ 14 ಕೊನೆಯ ದಿನವಾಗಿದೆ. ರೈತರು ಭತ್ತ (ಮಳೆ ಆಶ್ರಿತ) ಬೆಳೆಗೆ ಪತ್ರಿ ಎಕರೆಗೆ ರೂ.440 ಅಥವಾ ಹೆಕ್ಟೇರಿಗೆ ರೂ. 1100  ವಂತಿಗೆ ನೀಡಬೇಕಿದೆ.


        (ಗಲ್ಪ್ ಕನ್ನಡಿಗ)ಹೊಸ ಮಾರ್ಗಸೂಚಿಯನ್ವಯ ಈ ಬಾರಿ ಸಾಲ ಪಡೆದ ರೈತರಿಗೆ ಬೆಳೆ ವಿಮೆಯಡಿ ಒಳಪಡುವುದು ಐಚ್ಛಿಕವಾಗಿರುತ್ತದೆ. ಆಸಕ್ತಿ ಇಲ್ಲದ ರೈತರು ಬ್ಯಾಂಕ್‍ಗಳಲ್ಲಿ ನಿರಾಕರಣಾ ಪತ್ರವನ್ನು  ನೀಡಿ ನೋಂದಣಿಯಿಂದ ಹೊರ ಉಳಿಯಬಹುದು.(ನಿರಾಕರಣಾ ಪತ್ರವನ್ನು ನೊಂದಣಿಯ ಕೊನೆಯ ದಿನಾಂಕಕ್ಕಿಂತ ಏಳು ದಿನ ಮುಂಚಿತವಾಗಿ ನೀಡಬೇಕು)

ಸಲ್ಲಿಸಬೇಕಾದ  ದಾಖಲೆಗಳು:-  ಅರ್ಜಿ, ಪಹಣಿ, ಖಾತೆ, ಪಾಸ್‍ಪುಸ್ತಕ, ಕಂದಾಯ ರಶೀದಿ, ಆಧಾರ್ ಕಾರ್ಡ್ ಹೊಂದಿರಬೇಕು.


  (ಗಲ್ಪ್ ಕನ್ನಡಿಗ)ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಇಳುವರಿ ಮಾಹಿತಿಯನ್ನು ಪರಿಗಣಿಸಿ ಬೆಳೆ ನಷ್ಟ ನಿರ್ಧಾರ ಒಟ್ಟಾರೆ ಪ್ರದೇಶಕ್ಕೆ ಮಾಡಲಾಗುವುದು. ಬಿತ್ತನೆ ವಿಫಲಗೊಂಡಲ್ಲಿ - ಮಳೆಯ ಅಭಾವ/ಪ್ರತಿಕೂಲ ಹವಾಮಾನ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರ ವಿಫಲಗೊಂಡಲ್ಲಿ ಶೇ.25ರಷ್ಟು ಪರಿಹಾರ  ವರದಿ ಮಾಡಿಕೊಳ್ಳಲು ಆಗಸ್ಟ್ 22 ಕೊನೆಯ ದಿನ.
   

(ಗಲ್ಪ್ ಕನ್ನಡಿಗ) ಮಧ್ಯಂತರ ವಿಕೋಪಗಳಾದ - ಆಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ, ಬೆಂಕಿ ಅವಘಡಗಳಿಗೆ ವೈಯಕ್ತಿಕವಾಗಿ ನಿರ್ಧಾರ, 72 ಗಂಟೆಯೊಳಗೆ ವಿಮಾ ಸಂಸ್ಥೆಗೆ ಮಾಹಿತಿ ನೀಡಬೇಕಾಗಿರುತ್ತದೆ. ಬಿತ್ತನೆಯಾದ ನಂತರ ಕಟಾವಿಗೆ ಮೊದಲು ಸಾಮಾನ್ಯ ಇಳುವರಿಗಿಂತ ಶೇ.50ಕ್ಕಿಂತ ಹೆಚ್ಚಿನ ಬೆಳೆ ಹವಾಮಾನ ವೈಪರೀತ್ಯದಿಂದ ನಷ್ಟ ಸಂಭವಿಸಿದಲ್ಲಿ ಶೇ.25 ಮುಂಚಿತವಾಗಿ ಪರಿಹಾರ. ಬೆಳೆ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ – ಕಟಾವು ಮಾಡಿದ 14 ದಿನಗಳ ಒಳಗೆ ಮಳೆ ಮತ್ತು ಆಲಿಕಲ್ಲು ಮಳೆಯಿಂದ ನಷ್ಟ,  72 ಗಂಟೆಯೊಳಗೆ ವಿಮಾ ಸಂಸ್ಥೆಗೆ ಮಾಹಿತಿ ನೀಡಬೇಕಾಗಿರುತ್ತದೆ.
     

(ಗಲ್ಪ್ ಕನ್ನಡಿಗ)ಹೆಚ್ಚಿನ ವಿವರಗಳಿಗೆ ಹೋಬಳಿ ರೈತ ಸಂಪರ್ಕ ಕೇಂದ್ರ/ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮಂಗಳೂರು, ಸಹಾಯಕ ಕೃಷಿ ನಿರ್ದೇಶಕರು ದೂರವಾಣಿ ಸಂಖ್ಯೆ: 8277931071, ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕರು, ದೂರವಾಣಿ ಸಂಖ್ಯೆ: 8277931072, ಬೆಳ್ತಂಗಡಿ ಸಹಾಯಕ ಕೃಷಿ ನಿರ್ದೇಶಕರು, ದೂರವಾಣಿ ಸಂಖ್ಯೆ: 8277931066, ಪುತ್ತೂರು ಸಹಾಯಕ ಕೃಷಿ ನಿರ್ದೇಶಕರು, ದೂರವಾಣಿ ಸಂಖ್ಯೆ: 8277931079, ಸುಳ್ಯ ಸಹಾಯಕ ಕೃಷಿ ನಿರ್ದೇಶಕರು, ದೂರವಾಣಿ ಸಂಖ್ಯೆ: 8277931079, ಯುಎಸ್‍ಜಿಐಸಿ ವಿಮಾ ಸಂಸ್ಥೆ, ಸಂಜಯ ವತ್ಸ ಸಂಕೇತ್, ದೂರವಾಣಿ ಸಂಖ್ಯೆ: 7400446265, 7353814580 ರವರನ್ನು ಸಂಪರ್ಕಿಸಲು ಮಂಗಳೂರು   ಜಂಟಿ ಕೃಷಿ ನಿರ್ದೇಶಕ ಪ್ರಕಟಣೆ ತಿಳಿಸಿದೆ


(ಗಲ್ಪ್ ಕನ್ನಡಿಗ)

 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99