ಮಂಗಳೂರು ವಿಮಾನ‌ ನಿಲ್ದಾಣಕ್ಕೆ ಬಾಂಬ್ ಇರಿಸಲಾಗಿದೆ; ಕರೆಯ ಬೆನ್ನತ್ತಿ ಹೋದಾಗ....


(ಗಲ್ಫ್ ಕನ್ನಡಿಗ)ಮಂಗಳೂರು: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇರಿಸಲಾಗಿದೆ ಎಂಬ ಹುಸಿಕರೆಯೊಂದು ಇಂದು ವಿಮಾನ‌ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿತು.

(ಗಲ್ಫ್ ಕನ್ನಡಿಗ)ಮಧ್ಯಾಹ್ನ ವೇಳೆಗೆ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕರ ಮೊಬೈಲ್ ಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಬೆದರಿಕೆ ಕರೆ ಬೆನ್ನತ್ತಿದ್ದ ಸಿಐಎಸ್ಎಫ್ ಸಿಬ್ಬಂದಿ ವಿಮಾನ ನಿಲ್ದಾಣದ ಇಂಚಿಂಚು ಶೋಧ ನಡೆಸಿದ್ದಾರೆ. ಈ ವೇಳೆ ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ. ಬಂದ ಕರೆ ಹುಸಿ ಎಂಬುದು ದೃಢವಾಗಿದೆ.

(ಗಲ್ಫ್ ಕನ್ನಡಿಗ)ಇದೀಗ ಪೊಲೀಸರು ಬಾಂಬ್ ಕರೆ ಮಾಡಿದವರ ಶೋಧ ಕಾರ್ಯ ನಡೆಸುತ್ತಿದ್ದಾರೆ.