ತುಮಕೂರಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಖತರ್ನಾಕ್ ಸರಗಳ್ಳನ ಬಂಧನ.....
Wednesday, August 19, 2020
ತುಮಕೂರಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಖತರ್ನಾಕ್ ಸರಗಳ್ಳನ ಬಂಧನ.....
ಖತರ್ನಾಕ್ ಸರಗಳನನ್ನು ಬಂಧಿಸಿರುವ ಪೊಲೀಸರು ಆತನಿಂದ ಬರೋಬ್ಬರಿ 10 ಲಕ್ಷ ರೂ ಬೆಲೆಬಾಳುವ ಚಿನ್ನಾಭರಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಒಮ್ಮೆ ಈತನನ್ನು ಬಂಧಿಸಿದ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಲಾಕಪ್ ನಿಂದಲೇ ಪರಾರಿಯಾಗಿದ್ದನು. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ತಕ್ಷಣ ಆತನನ್ನು ಮಧುಗಿರಿ ತಾಲೂಕಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತುಮಕೂರು ನಗರದ ಅಂತರಸನಹಳ್ಳಿ ಪುಟ್ಟಮ್ಮನ ವಠಾರದಲ್ಲಿ ವಾಸವಿದ್ದ ರಂಗಪ್ಪ ಬಂಧಿತ ಆರೋಪಿಯಾಗಿದ್ದಾನೆ.
ಆ. 1ರಂದು ರಾತ್ರಿ ತುಮಕೂರು ತಾಲೂಕಿನ ಹಂಚಿಹಳ್ಳಿ ಗ್ರಾಮದ ಗಣೇಶ್ ಎಂಬುವರ ಮನೆಗೆ ನುಗ್ಗಿ ಚೈತ್ರ ಎಂಬುವರ ಕೊರಳಲ್ಲಿದ್ದ ಸರ ಕಿತ್ತುಕೊಳ್ಳಲು ಪ್ರಯತ್ನಿಸಿದ್ದನು. ನಂತರ ಅಲ್ಲಿಂದ ಪರಾರಿಯಾಗಿದ್ದ ಆತನನ್ನು ಕೋರಾ ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದರು. ಆದರೆ ಅಲ್ಲಿ ಆತ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದನು.
ರಂಗಪ್ಪನ ಮೇಲೆ 7 ಸುಲಿಗೆ ಪ್ರಕರಣಗಳು ದಾಖಲಾಗಿದ್ದವು. ರಂಗಪ್ಪ ನಿಂದ 194 ಗ್ರಾಂ ತೂಕದ ಐದು ಮಾಂಗಲ್ಯ ಸರ, ಎರಡು ಚಿನ್ನದ ಸರಗಳು ಸೇರಿದಂತೆ ಒಟ್ಟು 10 ಲಕ್ಷ ಬೆಲೆಬಾಳುವ ಚಿನ್ನಾಭರಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.