ದ್ವೇಷದ ಕಾಳ್ಗಿಚ್ಚು.... 600 ಅಡಿಕೆ ಬಾಳೆ ನಾಶ....
Wednesday, August 19, 2020
ದ್ವೇಷದ ಕಾಳ್ಗಿಚ್ಚು.... 600 ಅಡಿಕೆ ಬಾಳೆ ನಾಶ....
ಭೂವಿವಾದದ ಹಿನ್ನೆಲೆಯಲ್ಲಿ ಸುಮಾರು 600 ಅಡಿಕೆ ಬಾಳೆ ಗಿಡಗಳನ್ನು ಆಗಂತುಕರು ಕಡಿದು ಹಾಕಿರುವ ಘಟನೆ ತುಮಕೂರು ಜಿಲ್ಲೆಯ ಹೇರೂರು ಗ್ರಾಮದಲ್ಲಿ ಘಟಿಸಿದೆ.
ನಾಗರಾಜ್ ಎಂಬುವರಿಗೆ ಸೇರಿದ ಎರಡು ಎಕರೆ 30 ಗುಂಟೆ ಪ್ರದೇಶದಲ್ಲಿದ್ದ ಗಿಡಗಳನ್ನು ಸಂಪೂರ್ಣ ನೆಲಸಮಗೊಳಿಸಲಾಗಿದೆ.
ಇದರಿಂದ ಕಂಗಾಲಾಗಿರುವ ನಾಗರಾಜ್ , ತಮ್ಮ ಸಂಬಂಧಿಕರ ಈ ಕೃತ್ಯ ಎಸಗಿದ್ದು ಈಗಾಗಲೇ ಈ ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ