ಪ್ಲಾಸ್ಮಾ ದಾನ ಮಾಡಿದ ಕುಣಿಗಲ್ ಶಾಸಕ ಡಾ. ರಂಗನಾಥ್.....
Wednesday, August 19, 2020
ಪ್ಲಾಸ್ಮಾ ದಾನ ಮಾಡಿದ ಕುಣಿಗಲ್ ಶಾಸಕ ಡಾ. ರಂಗನಾಥ್.....
ಶಾಸಕ ಡಾ. ರಂಗನಾಥ್ ಮಾತು.....
'ಕೊರೊನಾ ಸೋಂಕಿನಿಂದ ಗುಣಮುಖನಾಗಿರುವ ನಾನು ಪ್ರಸ್ತುತ ಕೊರೊನಾ ಸೋಂಕಿನಿಂದ ತುಂಬಾ ಹೆಚ್ಚಾಗಿ ನರಳುತ್ತಿರುವ ಇಬ್ಬರು ಸೋಂಕಿತರಿಗೆ ನಾನೊಬ್ಬ ವೈದ್ಯನಾಗಿದ್ದುಕೊಂಡು ಬೆಂಗಳೂರಿನ ಹೆಚ್ ಸಿ ಜಿ ಆಸ್ಪತ್ರೆಯಲ್ಲಿ ಪ್ಲಾಸ್ಮಾ ನೀಡಿದ್ದೇನೆ. ಇದರಿಂದ ಆ ರೋಗಿಗಳಿಗೆ ರೋಗನಿರೋಧಕ ಶಕ್ತಿ ಹೆಚ್ಚಾಗಿ ಗುಣಮುಖರಾಗಲು ಸಹಾಯಕವಾಗಲಿದೆ.
ವೈರಸ್ ಭೀತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಗುಣಮುಖರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ನಾನು ಪ್ಲಾಸ್ಮಾ ದಾನ ಮಾಡಿದ್ದೇನೆ.
ನನ್ನಿಂದ ಇಬ್ಬರ ಜೀವ ಉಳಿಯುತ್ತದೆ ಎಂದರೆ ಅದಕ್ಕಿಂತ ಪುಣ್ಯದ ಕೆಲಸ ಬೇರೆ ಇಲ್ಲ ಎಂಬುದೇ ನನ್ನ ಅಭಿಪ್ರಾಯ'
ಎಂದಿದ್ದಾರೆ.......