ಸೌದಿಯಿಂದ ಮತ್ತೊಮ್ಮೆ ಪಾಕ್ ಗೆ ಮುಖಭಂಗ: ರಾಜಕುಮಾರನ ಭೇಟಿಯಾಗಲು ನೋ ಪರ್ಮಿಷನ್!
(ಗಲ್ಪ್ ಕನ್ನಡಿಗ)ಸೌದಿಯ ಕೋಪಕ್ಕೆ ತುತ್ತಾಗಿರುವ ಪಾಕಿಸ್ತಾನ ಸೌದಿಯನ್ನು ಒಲಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನ ಪದೇ ಪದೇ ವಿಫಲವಾಗುತ್ತಿದೆ. ಸೌದಿ ರಾಜಕುಮಾರನೊಂದಿಗೆ ಮಾತುಕತೆಗೆ ಹೋಗಿದ್ದ ಪಾಕಿಸ್ತಾನ ಸೇನಾ ಮುಖ್ಯಸ್ಥನಿಗೆ ರಾಜಕುಮಾರನ ಭೇಟಿಯಾಗಲು ಅನುಮತಿ ಸಿಗದೆ ಸಭೆ ನಡೆಸಲು ವಿಫಲರಾಗಿದ್ದಾರೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರು ಸೌದಿ ರಾಜಕುಮಾರನ ಭೇಟಿಯಾಗಲು ರಿಯಾದ್ ಗೆ ತೆರಳಿದ್ದರು. ಆದರೆ ಸೌದಿ ರಾಜಕುಮಾರ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಪಾಕ್ ಸಏನಾ ಮುಖ್ಯಸ್ಥನಿಗೆ ಭೇಟಿಯಾಗಲು ಅವಕಾಶವನ್ನೆ ನೀಡಿಲ್ಲ. ಎರಡು ದೇಶಗಳ ನಡುಬೆ ಉಂಟಾಗಿರುವ ಬಿರುಕು ಸರಿಪಡಿಸಲೆಂದೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಮತ್ತು ಐಎಸ್ಐ ಮುಖ್ಯಸ್ಥ ಜನರಲ್ ಫೈಜ್ ಹಮೀದ್ ಸೌದಿ ಅರೇಬಿಯಕ್ಕೆ ಹೋಗಿದ್ದರು.
ಸೌದಿ ಅರೇಬಿಯಾದ ಉಪರಕ್ಷಣಾ ಸಚಿವ ಪ್ರಿನ್ಸ್ ಖಾಲಿದ್ ಬಿನ್ ಸಲ್ಮಾನ್ ಮತ್ತು ಸೌದಿ ಅರೇಬಿಯಾದ ಮಿಲಿಟರಿ ಮುಖ್ಯಸ್ಥ ಜನರಲ್ ಫಯಾದ್ ಬಿನ್ ಹಮೀದ್ ಅಲ್ ರುವಾಯಿಲಿ ಅವರನ್ನು ಪಾಕ್ ಸೇನಾ ಮುಖ್ಯಸ್ಥ ಭೇಟಿಯಾದರೂ ರಾಜಕುಮಾರನನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಕಾಶ್ಮೀರ ವಿಚಾರದಲ್ಲಿ ಭಾರತದ ವಿರುದ್ದ ಕ್ರಮಕ್ಕೆ ಸೌದಿ ಅರೇಬಿಯಾ ನಿರಾಕರಿಸಿದ ನಂತರ ಪಾಕ್ ವಿದೇಶಾಂಗ ಸಚಿವ ಷಾಹ್ ಮೆಹಮೂದ್ ಖುರೇಷಿ ಸೌದಿ ಅರೇಬಿಯಾಕ್ಕೆ ನೀಡಿದ ಎಚ್ಚರಿಕೆ ಬಳಿಕ ಉಭಯ ದೇಶಗಳ ನಡುವೆ ಬಿರುಕು ಮೂಡಿತ್ತು
(ಗಲ್ಪ್ ಕನ್ನಡಿಗ)