-->

ಶೀಘ್ರವಾಗಿ ಪ್ರವಾಹ ಸಮೀಕ್ಷೆ ಕೈಗೊಳ್ಳಿ: ಉತ್ತರ ಕನ್ನಡ ಡಿ.ಸಿ

ಶೀಘ್ರವಾಗಿ ಪ್ರವಾಹ ಸಮೀಕ್ಷೆ ಕೈಗೊಳ್ಳಿ: ಉತ್ತರ ಕನ್ನಡ ಡಿ.ಸಿ


ಕಾರವಾರ : ಜಿಲ್ಲೆಯಲ್ಲಿ ಸಂಭವಿಸಿರುವಂತಹ ಪ್ರವಾಹದಿಂದಾಗಿ ಹಾನಿಗೊಳ್ಳಗಾದ ಮನೆಗಳ ಸಮೀಕ್ಷೆಯನ್ನು ತುರ್ತಾಗಿ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಛೇರಿ ನ್ಯಾಯಾಲಯ ಸಂಭಾಣಗಣದಲ್ಲಿ ಮಂಗಳವಾರ ಜಿಲ್ಲೆಯ ಎಲ್ಲ ಸಹಾಯಕ ಆಯುಕ್ತರು ಹಾಗೂ ತಹಶಿಲ್ದಾರರೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿ ಈಗಾಗಲೇ ಮನೆಗಳ ಸಮೀಕ್ಷೆಗೆ ಗಡವು  ನೀಡಿರುವುದರಿಂದ  ಸಮೀಕ್ಷೆ ವಿಳಂಬವಾಗದಂತೆ ಶ್ರೀಘವಾಗಿ ಹಾನಿಗೊಳ್ಳಗಾದ ಮನೆಗಳ ಸಮೀಕ್ಷೆ ಪೂರ್ಣಗೊಳಿಸಬೇಕು. ಪಿ ಡಿ ಒ ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಇದಕ್ಕಾಗಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದರು. 
ಅರ್ಹ ಫಲಾನುಭವಿಗಳು  ಸಮೀಕ್ಷೆಯಿಂದ ತಪ್ಪಿಹೋಗಬಾರದು ಮನೆ ಸಮೀಕ್ಷೆ ಸಂದರ್ಭದಲ್ಲಿ ಮನೆಯ ನೈಜ ಸ್ಥಿತಿಗತಿ ಪರಿಶೀಲಿಸಿ ಶೇಕಡಾವಾರು ಆದ ಹಾನಿಯನ್ನು ನಮೂದಿಸಬೇಕು ಈ ಕಾರ್ಯಕ್ಕೆ ನಿಯೋಜಿಸಲಾದ ನೂಡಲ್ ಅಧಿಕಾರಿಗಳು ಮನೆ ಮನೆಗೆ ಬೇಟಿ ನೀಡಿ ಪರಿಶೀಲಿಸಬೇಕು. ಒಂದು ವೇಳೆ ಫಲಾನುಭವಿಗಳು ತಪ್ಪು ಮಾಹಿತಿ ನೀಡಿದ್ದರೆ ಜಾಗೃಕತೆಯಿಂದಾ ಸಮೀಕ್ಷೆ ಕೈಗೊಂಡು ನೈಜ ಫಲಾನುಭವಿಗಳ ಆಯ್ಕೆಯಾಗಬೇಕು  ಕಡಿಮೆ ಸಮಯದ ಗಡವು ನೀಡಿರುವದರಿಂದ ಎಲ್ಲರೂ ತಮಗೆ ನೀಡಿದಂತಹ ನಿಗದಿತ ಸಮಯದಲ್ಲಿ ಸರಿಯಾಗಿ ಮುಗಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕೆಂದರು. 
ಈ ಸಂದರ್ಭದಲಿ ಜಿಲ್ಲಾ ಪೊಲಿಸ್‍ವರೀಷ್ಠಾಧಿಕಾರಿ ಶಿವಪ್ರಕಾಶ ದೇವರಾಜು,  ಅಪರಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ. ಪ್ರಿಯಾಂಗಾ ಎಮ್. ತಹಶೀಲ್ದಾರ ಆರ್.ವಿ,ಕಟ್ಟಿ ಸೇರಿದಂತೆ ಇತರರು ಹಾಜರಿದ್ದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99