ಮಂಗಳೂರಿನಲ್ಲಿ ಐಸ್ ಕ್ರೀಂ ಫ್ಯಾಕ್ಟರಿ ಗೆ ಹೋದ 20 ವರ್ಷದ ಯುವತಿ ನಾಪತ್ತೆ
Wednesday, August 26, 2020
(ಗಲ್ಫ್ ಕನ್ನಡಿಗ)ಮಂಗಳೂರು; ಐಸ್ ಕ್ರೀಂ ಫ್ಯಾಕ್ಟರಿಗೆ ಕೆಲಸಕ್ಕೆಂದು ಹೋದ ಯುವತಿ ನಾಪತ್ತೆಯಾದ ಘಟನೆ ನಡೆದಿದೆ.
(ಗಲ್ಫ್ ಕನ್ನಡಿಗ)ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ದೇವಸ್ಯ ಎಂಬಲ್ಲಿನ ತೀರ್ಥಲತಾ (20 ) ಎಂಬಾಕೆ ನಾಪತ್ತೆಯಾದವಳು.
(ಗಲ್ಫ್ ಕನ್ನಡಿಗ)ಈಕೆ ಮಂಗಳೂರಿನ ಐಡಿಯಲ್ ಐಸ್ ಕ್ರೀಂ ಫ್ಯಾಕ್ಟರಿ ಯಲ್ಲಿ ಕೆಲಸ ಮಾಡುತ್ತಿದ್ದಳು. ಈಕೆ ಕೆಲಸಕ್ಕೆಂದು ಮಂಗಳೂರಿಗೆ ತೆರಳಿ ಮರಳಿ ಮನೆಗೆ ಬರದೆ ನಾಪತ್ತೆಯಾಗಿದ್ದಾಳೆ. ಆಗಷ್ಟ್ 22 ರಂದು ಫ್ಯಾಕ್ಟರಿ ಗೆ ತೆರಳಿದ್ದು ಬಳಿಕ ಮನೆಗೆ ಮರಳಿ ಬಂದಿಲ್ಲ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಗಲ್ಫ್ ಕನ್ನಡಿಗ)