ನನ್ನ ಗಂಡ .... ಮಾಡುವುದಿಲ್ಲ, ಡೈವೋರ್ಸ್ ಕೊಡಿ; ಮಹಿಳೆಯ ವಿಚಿತ್ರ ವಾದ!
Wednesday, August 26, 2020
(ಗಲ್ಫ್ ಕನ್ನಡಿಗ)ಸಂಭಾಲ್; ನನ್ನ ಗಂಡ ನನ್ನನ್ನು ಅತಿಯಾಗಿ ಪ್ರೀತಿಸುತ್ತಾರೆ. ಜಗಳ ಮಾಡುವುದಿಲ್ಲ . ಡೈವೊರ್ಸ್ ಕೊಡಿ ಎಂದು ಮಹಿಳೆಯೊಬ್ಬರು ಷರಿಯಾ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
(ಗಲ್ಫ್ ಕನ್ನಡಿಗ)ಈ ವಿಚಿತ್ರವಾದ ಘಟನೆ ನಡೆದದ್ದು ಉತ್ತರಪ್ರದೇಶದ ಸಂಭಾಳ್ ಜಿಲ್ಲೆಯಲ್ಲಿ. ಈ ಜೋಡಿಗೆ ಮದುವೆಯಾಗಿ ಕೇವಲ 18 ತಿಂಗಳು ಮಾತ್ರ ಆಗಿದೆ.
(ಗಲ್ಫ್ ಕನ್ನಡಿಗ)ಈ ಅರ್ಜಿ ಸ್ವೀಕರಿಸಿದ ಷರಿಯಾ ನ್ಯಾಯಾಲಯದ ಮುಖ್ಯಸ್ಥರು ಈ ವಿಲಕ್ಷಣ ಅರ್ಜಿಯನ್ನು ಕ್ಷುಲ್ಲಕ ಕಾರಣವೆಂದು ತಿರಸ್ಕರಿಸಿದ್ದಾರೆ.
ಉಸಿರುಗಟ್ಟಿದ ಭಾವನೆ!
(ಗಲ್ಫ್ ಕನ್ನಡಿಗ) ಷರಿಯಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಮಹಿಳೆ ತನ್ನ ಗಂಡನ ಪ್ರೀತಿಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾಳೆ. "ಗಂಡ ಎಂದಿಗೂ ನನ್ನ ಜೊತೆಗೆ ಜಗಳ ಮಾಡಲಿಲ್ಲ ಅಥವಾ ಯಾವುದೇ ವಿಷಯದ ಬಗ್ಗೆ ಅವನು ನನ್ನನ್ನು ನಿರಾಶೆಗೊಳಿಸಲಿಲ್ಲ. ಅಂತಹ ವಾತಾವರಣದಲ್ಲಿ ನನಗೆ ಉಸಿರುಗಟ್ಟಿದೆ ಎಂದು ಭಾವಿಸುತ್ತೇನೆ. ಕೆಲವೊಮ್ಮೆ ಅವನು ನನಗಾಗಿ ಅಡುಗೆ ಮಾಡುತ್ತಾನೆ ಮತ್ತು ಮನೆಕೆಲಸಗಳನ್ನು ಮಾಡಿ ಸಹಕರಿಸುತ್ತಾನೆ" ಎಂದು ಮಹಿಳೆ ಅರ್ಜಿಯಲ್ಲಿ ಹೇಳಿದ್ದಾರೆ.
ನಾನು ತಪ್ಪು ಮಾಡಿದಾಗಲೆಲ್ಲಾ ಅವನು ನನ್ನನ್ನು ಯಾವಾಗಲೂ ಕ್ಷಮಿಸುತ್ತಾನೆ. ನಾನು ಅವನೊಂದಿಗೆ ವಾದಿಸಲು ಬಯಸುತ್ತಿದ್ದೆ. ಆದರೆ ಗಂಡನ ಯಾವುದಕ್ಕೂ ಒಪ್ಪುವ ಜೀವನ ನನಗೆ ಅಗತ್ಯವಿಲ್ಲ" ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ.
(ಗಲ್ಫ್ ಕನ್ನಡಿಗ)ವಿಚ್ಚೇದನ ನೀಡಲು ಬೇರೆ ಕಾರಣವಿದೆಯೇ ಎಂದು ಮಹಿಳೆಯನ್ನು ಪ್ರಶ್ನಿಸಿದಾಗ ಅವರು ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
(ಗಲ್ಫ್ ಕನ್ನಡಿಗ)ಇದರ ಮಧ್ಯೆ ಮಹಿಳೆಯ ಗಂಡ ತಾನು ಯಾವಾಗಲೂ ತನ್ನ ಪತ್ನಿಯನ್ನು ಸಂತೋಷವಾಗಿಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಈ ಪ್ರಕರಣವನ್ನು ಹಿಂದಿರುಗಿಸುವಂತೆ ಅವರು ಷರಿಯಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಷರಿಯಾ ನ್ಯಾಯಾಲಯವು ದಂಪತಿಗಳಲ್ಲಿ ಸಮಸ್ಯೆ ಪರಿಹರಿಸಲು ಸೂಚಿಸಿದೆ ಎಂದು ತಿಳಿದುಬಂದಿದೆ.