ದ.ಕ. ಜಿಲ್ಲೆಯ ತಾಲೂಕುವಾರು ಕೋವಿಡ್ ಸೋಂಕಿತರ ಮಾಹಿತಿ
Wednesday, August 12, 2020
(ಗಲ್ಪ್ ಕನ್ನಡಿಗ)ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು ಮತ್ತೆ 229 ಮಂದಿಗೆ ಸೋಂಕು ದೃಢಪಟ್ಟಿದೆ.
(ಗಲ್ಪ್ ಕನ್ನಡಿಗ)ಈ ಪೈಕಿ ಮಂಗಳೂರು ತಾಲೂಕಿನ ಗರಿಷ್ಠ 133 ಮಂದಿಗೆ ಸೋಂಕು ದೃಢ ಪಟ್ಟಿದ್ದರೆ, ಬಂಟ್ವಾಳ ತಾಲೂಕಿನ 45 ಮಂದಿ, ಪುತ್ತೂರು ತಾಲೂಕಿನ 22 ಮಂದಿ, ಸುಳ್ಯ ತಾಲೂಕಿನ 5ಮಂದಿ, ಬೆಳ್ತಂಗಡಿ ತಾಲೂಕಿನ 14 ಮಂದಿ ಹಾಗೂ ಹೊರ ಜಿಲ್ಲೆಗಳ 10 ಮಂದಿ ಕೋವಿಡ್- 19ಗೆ ತುತ್ತಾಗಿದ್ದಾರೆ.
(ಗಲ್ಪ್ ಕನ್ನಡಿಗ) ಜಿಲ್ಲೆಯಲ್ಲಿ ಇದುವರೆಗೆ 59,750 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಆ ಪೈಕಿ 51,925 ಮಂದಿಯ ವರದಿ ನೆಗೆಟಿವ್ ಬಂದಿದ್ದು, 7,825 ಮಂದಿಯ ವರಿದಿ ಪಾಸಿಟಿವ್ ಬಂದಿದೆ. 5,232 ಮಂದಿ ಕೊರೊನಾ ಮುಕ್ತರಾಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.