ಮಾಜಿ ಎಂ ಎಲ್ ಸಿ ಐವನ್ ಡಿಸೋಜ ಕೊರೊನಾ ಮುಕ್ತ


(ಗಲ್ಪ್ ಕನ್ನಡಿಗ)ಮಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಮತ್ತು ಅವರ ಪತ್ನಿ ಕೊರೊನಾದಿಂದ ಇಂದು ಗುಣಮುಖರಾಗಿದ್ದಾರೆ.

 

(ಗಲ್ಪ್ ಕನ್ನಡಿಗ)ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐವನ್ ಡಿ ಸೋಜ ದಂಪತಿಗಳು ಇಂದು ಕೊರೊನಾ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 

 

 

(ಗಲ್ಪ್ ಕನ್ನಡಿಗ)ಈ ಬಗ್ಗೆ ಟ್ವಿಟರ್‌ನಲ್ಲಿ ಹೇಳಿಕೊಂಡಿರುವ ಮಾಜಿ ಶಾಸಕರು, ನಾನು ಮತ್ತು ನನ್ನ ಪತ್ನಿ ಕೋವಿಡ್ 19 ನಿಂದ ಮುಕ್ತರಾಗಿ ಬಿಡುಗಡೆಗೊಂಡಿದ್ದೇವೆ. ಇನ್ನೂ ಐದು ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿರುವಂತೆ ವೈದ್ಯರು ಸೂಚಿಸಿದ್ದಾರೆ. ಎಲ್ಲರ ಹಾರೈಕೆಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.