-->

ನಕಲಿ ಕಾರ್ಮಿಕರ ಬಳಿ ಕಾರ್ಮಿಕರ ಕಾರ್ಡ್​ ಇದ್ರೆ ಕಾರ್ಮಿಕರೇ ಪತ್ತೆ ಹಚ್ಚಬೇಕು- ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ

ನಕಲಿ ಕಾರ್ಮಿಕರ ಬಳಿ ಕಾರ್ಮಿಕರ ಕಾರ್ಡ್​ ಇದ್ರೆ ಕಾರ್ಮಿಕರೇ ಪತ್ತೆ ಹಚ್ಚಬೇಕು- ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ
ಹಾವೇರಿ: ಕಾರ್ವಿುಕರು ಮತ್ತು ಉದ್ಯಮಿಗಳ ಮಧ್ಯೆ ಸೇತುವೆಯಾಗಿರುವ ಕಾರ್ವಿುಕ ಇಲಾಖೆಗೆ ಹೊಸ ರೂಪ ನೀಡಲಾಗುತ್ತಿದೆ. ಇಲಾಖೆಯ ಯೋಜನೆಗಳ ಕಾರ್ಯ ಸ್ವರೂಪದಲ್ಲಿ ಸಮಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಕಾರ್ವಿುಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಇಲಾಖೆಗೆ ಆಧುನಿಕ ಸ್ಪರ್ಶ ನೀಡಲಾಗುವುದು ಎಂದು ಕಾರ್ವಿುಕ ಹಾಗೂ ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕಾರ್ವಿುಕ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಕಾರ್ವಿುಕರೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು. ಕಾರ್ವಿುಕ ಇಲಾಖೆ ಯಾರಿಗೂ ಬೇಡದ ಇಲಾಖೆಯಾಗಿತ್ತು. ಇದರ ಬಲವರ್ಧನೆಗಾಗಿ ಮೊದಲ ಬಾರಿಗೆ ಪ್ರವಾಸ ಕೈಗೊಂಡು ನೇರವಾಗಿ ಕಾರ್ವಿುಕರ ಅಹವಾಲುಗಳನ್ನು ಸ್ವೀಕರಿಸಲಾಗುತ್ತಿದೆ. ಯೋಜನೆಗಳು ಹಾಗೂ ಸೌಲಭ್ಯಗಳ ವಿತರಣೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದರು.

ಇಎಸ್​ಐ ಆಸ್ಪತ್ರೆಗಳಿಗೆ 150 ವೈದ್ಯರನ್ನು ನೇಮಿಸಲಾಗಿದೆ. ಕಾರ್ವಿುಕ ವಿಮಾ ಆಸ್ಪತ್ರೆಗಳಲ್ಲಿ ಯಾವುದೇ ಔಷಧಗಳ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ. ಇಎಸ್​ಐ ಆಸ್ಪತ್ರೆಗಳ ಜೊತೆಗೆ ಇತರ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಸಂಘಟಿತ ಮತ್ತು ಅಸಂಘಟಿತ ಕಾರ್ವಿುಕರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಕಾರ್ವಿುಕ ಇಲಾಖೆಯಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕರೊನಾ ಸಂಕಷ್ಟ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ದಿಟ್ಟ ನಿಲುವಿನಿಂದ ಕಾರ್ವಿುಕರ ಹಿತಕ್ಕಾಗಿ ದೇಶದಲ್ಲಿಯೇ ರಾಜ್ಯ ಹೆಚ್ಚು ಅನುದಾನ ಖರ್ಚು ಮಾಡಿದೆ. ಯಾವೊಬ್ಬ ಕಾರ್ವಿುಕರೂ ಹಸಿವಿನಿಂದ ಬಳಲಬಾರದು. 1.59 ಕೋಟಿ ಸಂಘಟಿತ ಮತ್ತು ಅಸಂಘಟಿತ ಕಾರ್ವಿುಕರಿಗೆ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ವಿುಕರ ಕಲ್ಯಾಣ ಮಂಡಳಿಯಿಂದ 60,326 ಕಾರ್ವಿುಕರು ನೋಂದಾಯಿಸಿಕೊಂಡಿದ್ದಾರೆ. ಅವರಿಗೆ ತಲಾ 5 ಸಾವಿರದಂತೆ ಪರಿಹಾರ ಘೊಷಿಸಲಾಗಿತ್ತು. ಈವರೆಗೆ 30,675 ಫಲಾನುಭವಿಗಳಿಗೆ ಪರಿಹಾರ ಜಮೆಯಾಗಿದೆ. ಅಗಸರು, ಕ್ಷೌರಿಕ ವೃತ್ತಿಯಲ್ಲಿ ತೊಡಗಿದವರಿಗೂ 5 ಸಾವಿರ ರೂ. ಪರಿಹಾರ ಘೊಷಣೆಯಾಗಿದ್ದು, ಜಿಲ್ಲೆಯಿಂದ ಸೇವಾ ಸಿಂಧು ಆಪ್​ನಲ್ಲಿ 4,090 ಅರ್ಜಿ ಬಂದಿವೆ. ಇದರಲ್ಲಿ 3,237 ಕಾರ್ವಿುಕರಿಗೆ ಡಿಬಿಟಿ ಮೂಲಕ ಹಣ ಜಮೆ ಮಾಡಲಾಗಿದೆ. ಜಿಲ್ಲೆಯಲ್ಲಿ 9,738 ಫಲಾನುಭವಿಗಳಿಗೆ ಮದುವೆ, ಶೈಕ್ಷಣಿಕ ಹಾಗೂ ವೈದ್ಯಕೀಯ ಧನ ಸಹಾಯವಾಗಿ 8.95 ಕೋಟಿ ರೂ. ಧನಸಹಾಯವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಅಂಬೇಡ್ಕರ್ ಕಾರ್ವಿುಕ ಸಹಾಯಹಸ್ತ ಯೋಜನೆಯಡಿ 534 ಜನರಿಗೆ ಸ್ಮಾರ್ಟ್​ಕಾರ್ಡ್ ನೀಡಲಾಗಿದೆ. ನಿರ್ವಿುತಿ ಕೇಂದ್ರ ಹಾಗೂ ಕಾರ್ವಿುಕ ಕಲ್ಯಾಣ ಮಂಡಳಿಯಿಂದ 540 ಕಾರ್ವಿುಕರಿಗೆ ತರಬೇತಿ ಹಾಗೂ 333 ಕಾರ್ವಿುಕರಿಗೆ ಟೂಲ್ಕಿಟ್ ವಿತರಿಸಲಾಗಿದೆ. ಖಾಸಗಿ ವಾಣಿಜ್ಯ ಚಾಲಕರ ಯೋಜನೆಯಡಿ 634 ಚಾಲಕರಿಗೆ ರೆಡ್​ಕ್ರಾಸ್ ಸಂಸ್ಥೆಯಿಂದ ಪ್ರಥಮ ಚಿಕಿತ್ಸೆ ಕಿಟ್ ವಿತರಿಸಲಾಗಿದೆ ಎಂದರು.

ಕಟ್ಟಡ ಕಾರ್ವಿುಕರಿಗೆ, ಮದುವೆ, ವೈದ್ಯಕೀಯ ಹಾಗೂ ಶೈಕ್ಷಣಿಕ ಸಹಾಯಧನದ ಮಂಜೂರಾತಿ ಪತ್ರ ಹಾಗೂ ಪರಿಹಾರ ಚೆಕ್​ಗಳನ್ನು, ಕಟ್ಟಡ ಕಾರ್ವಿುಕರ ಗುರುತಿನ ಪತ್ರಗಳನ್ನು ವಿತರಿಸಲಾಯಿತು. ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಸಿಇಒ ರಮೇಶ ದೇಸಾಯಿ, ಉಪವಿಭಾಗಾಧಿಕಾರಿ ಡಾ. ದಿಲೀಪ್ ಶಶಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಉಪ ಕಾರ್ವಿುಕ ಆಯುಕ್ತ ವೆಂಕಟೇಶ ಸಿಂದಿಹಟ್ಟಿ, ಸಹಾಯಕ ಕಾರ್ವಿುಕ ಆಯುಕ್ತೆ ಮೀನಾ ಪಾಟೀಲ, ಜಿಲ್ಲಾ ಕಾರ್ವಿುಕ ಅಧಿಕಾರಿ ಲಲಿತಾ ಸಾತೇನಹಳ್ಳಿ, ಜಿಪಂ ಸದಸ್ಯ ಸಿದ್ದರಾಜ ಕಲಕೋಟಿ ಇತರರಿದ್ದರು.

ನಕಲಿ ಕಾರ್ಡ್ ಪತ್ತೆ ಕಾರ್ವಿುಕರ ಜವಾಬ್ದಾರಿ: ನೈಜ ಕಟ್ಟಡ ಕಾರ್ವಿುಕರ ಬದಲಿಗೆ ಕೇವಲ ಸೌಲಭ್ಯಕ್ಕಾಗಿ ಕೆಲವರು ಕಾರ್ಡ್ ಮಾಡಿಕೊಂಡಿರುವ ದೂರುಗಳಿವೆ. ಇಂತಹ ಕಾರ್ವಿುಕ ಗುರುತಿನ ಚೀಟಿಗಳನ್ನು ರದ್ದುಪಡಿಸುವ ಜವಾಬ್ದಾರಿ ನೈಜ ಕಾರ್ವಿುಕರದ್ದಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಹಾಗೂ ಕಾರ್ವಿುಕ ಇಲಾಖೆಗೆ ಮಾಹಿತಿ ನೀಡಿ ಕಾರ್ಡ್​ಗಳನ್ನು ರದ್ದುಪಡಿಸಬೇಕು. ಜಿಲ್ಲಾಧಿಕಾರಿ ಸಹಿ ಮತ್ತು ಮುದ್ರೆಯಿರುವ ಕಾರ್ಡ್​ಗಳಿಗೆ ಮಾತ್ರ ಮಾನ್ಯತೆ ಇರುತ್ತದೆ. ಏಜೆಂಟರ ಮೂಲಕ ಕಾರ್ವಿುಕ ಕಾರ್ಡ್ ಮಾಡಿಸಲು ಮುಂದಾಗದೇ ಫಲಾನುಭವಿಗಳೇ ನೇರವಾಗಿ ಇಲಾಖೆಗೆ ಅರ್ಜಿ ಸಲ್ಲಿಸಿ ಕಾರ್ಡ್ ಪಡೆಯಬೇಕು ಎಂದು ಸಚಿವ ಹೆಬ್ಬಾರ ಕಾರ್ವಿುಕರಿಗೆ ಸೂಚಿಸಿದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99