ಪುತ್ತೂರಿನಲ್ಲಿ ಬಕೆಟ್ ಗೆ ಬಿದ್ದು 8 ತಿಂಗಳ ಮಗು ಮೃತ್ಯು


(ಗಲ್ಫ್ ಕನ್ನಡಿಗ) ಮಂಗಳೂರು; ನೀರು ತುಂಬಿಸಿಟ್ಟ ಬಕೆಟ್ ಗೆ ಎಂಟು ತಿಂಗಳ ಮಗುವೊಂದು ಬಿದ್ದು ಸಾವನ್ನಪ್ಪಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

(ಗಲ್ಫ್ ಕನ್ನಡಿಗ) ಪುತ್ತೂರು ತಾಲೂಕಿನ ಕೊಂಬೆಟ್ಟುವಿನಲ್ಲಿ ಘಟನೆ ನಡೆದಿದೆ. ಬುಧವಾರ ಸಂಜೆ ಈ ಘಟನೆ ನಡೆದಿದ್ದು ಮಗು ನೀರು ತುಂಬಿದ ಬಕೆಟ್ ನಲ್ಲಿ ಸಾವನ್ನಪ್ಪಿದೆ. 

(ಗಲ್ಫ್ ಕನ್ನಡಿಗ) ಕೊಂಬೆಟ್ಟು ಸಮೀಪದ ಬಾಡಿಗೆ ಮನೆಯಲ್ಲಿ ವಾಸವಿರುವ ದಂಪತಿಗಳ ಎಂಟು ತಿಂಗಳ ಮಗು ಬಕೆಟ್ ಗೆ ಬಿದ್ದದ್ದು ದಂಪತಿಗಳಿಗೆ ತಡವಾಗಿ ತಿಳಿದುಬಂದಿದೆ. ಮಗು ಬಕೆಟ್ ನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದೆ.

(ಗಲ್ಫ್ ಕನ್ನಡಿಗ)