ಮತದಾರರ ಪಟ್ಟಿ ಪ್ರಕಟ ; ಆಕ್ಷೇಪಣೆಗೆ ಅವಕಾಶ
Thursday, August 13, 2020
ಕಾರವಾರ -: ಗ್ರಾಮ ಪಂಚಾಯತಗಳ 2020 ರ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಜಿಲ್ಲೆಯ 12 ತಾಲೂಕಿನ 231 ಗ್ರಾಮ ಪಂಚಾಯತಗಳ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಮತದಾರರ ಪಟ್ಟಿಯ ಪ್ರತಿಗಳನ್ನು ಪ್ರತಿಯೊಂದು ಕ್ಷೇತ್ರದ ಮತಗಟ್ಟೆಯಲ್ಲಿ, ಗ್ರಾಮ ಪಂಚಾಯತಿ ಕಛೇರಿ ತಹಶೀಲ್ದಾರ ಕಛೇರಿ ಮತ್ತು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಾರ್ವಜನಿಕರ ಪರಿಶಿಲನೆಗಾಗಿ ಇಡಲಾಗಿರುತ್ತದೆ.
ಮತದಾರರು ಕರಡು ಮತದಾರ ಪಟ್ಟಿಯನ್ನು ಪರೀಶಿಲಿಸಿ ಮತದಾರರ ಹೆಸರು, ತಾವು ವಾಸವಿರುವ ಕ್ಷೇತ್ರದ ವ್ಯಾಪ್ತಿಯಲ್ಲಿ ಇರದೇ ಬೇರೆ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದಲಿ,್ಲ ಆ ಬಗ್ಗೆ ಏನಾದರೂ ಆಕ್ಷೇಪಣೆಗಳು ಇದ್ದಲ್ಲಿ ಸಂಬಂಧಿಸಿದ ತಹಶಿಲ್ದಾರವರಿಗೆ ಅಗಷ್ಟ್ 14 ರೊಳಗಾಗಿ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.