ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಕೆಡವಲು ಡ್ರಗ್ಸ್ ಜಾಲದ ಹಣ ಬಳಕೆ: ಎಚ್ ಡಿ ಕೆ...

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಕೆಡವಲು  ಡ್ರಗ್ಸ್ ಜಾಲದ ಹಣ ಬಳಕೆ....
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್

(ಗಲ್ಫ್ ಕನ್ನಡಿಗ) ತುಮಕೂರು; ಬೆಂಗಳೂರು ಡ್ರಗ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. 

(ಗಲ್ಫ್ ಕನ್ನಡಿಗ) ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಕೆಡವಲು ಕ್ರಿಕೆಟ್ ಬೆಟ್ಟಿಂಗ್ ಹಾಗೂ ಡ್ರಗ್ ಮಾರಾಟ ಜಾಲ ದಿಂದ ಬಂದ ಹಣ  ಬಳಕೆಯಾಗಿದೆ ಎಂದಿದ್ದಾರೆ. ಹೀಗಾಗಿ ಪ್ರಸ್ತುತ ಬಿಜೆಪಿ ಸರ್ಕಾರ ಈ ವಿಚಾರದಲ್ಲಿ ಯಾವ ಮುಲಾಜಿಗೆ ಒಳಗಾಗದೆ ಕ್ರಮ ವಹಿಸಬೇಕು. ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದರು.

(ಗಲ್ಫ್ ಕನ್ನಡಿಗ) ಇವತ್ತಿನ ಸಿಸ್ಟಂ ಸರಿಯಿಲ್ಲ ಸಂಪೂರ್ಣ ಹಾಳಾಗಿದೆ‌. ಸಿಸ್ಟಮ್ ಸರಿ ಮಾಡಬೇಕಿದೆ. ನಾನು ಕೂಡ ನಿರ್ಮಾಪಕನಾಗಿ ಕೆಲಸ ಮಾಡಿದ್ದೇನೆ. ನನ್ನ ವ್ಯಾಪ್ತಿಯಲ್ಲಿ ಇದು ಯಾವುದು ಗಮನಕ್ಕೆ ಬಂದಿರಲಿಲ್ಲ‌ ಎಂದರು.