ಬಿಫಾರ್ಮ್ , ಎಂ ಫಾರ್ಮ್ ವ್ಯಾಸಂಗ ಮಾಡಿ ಪತ್ರಿಕೋದ್ಯಮದತ್ತ ಆಕರ್ಷಿತರಾಗಿ ಸಾಧನೆ ಮಾಡಿದ ಮಹಾನ್ ವ್ಯಕ್ತಿ ಬಿ ಜಿ ಮೋಹನ್ ದಾಸ್


(ಗಲ್ಪ್ ಕನ್ನಡಿಗ)ಗಲ್ಪ್ ಕನ್ನಡಿಗ ಸಂಸ್ಥಾಪಕ ಬಿ ಜಿ ಮೋಹನ್ ದಾಸ್  ಬಿಫಾರ್ಮ್ ಮತ್ತು ಎಂಪಾರ್ಮ್ ಅಧ್ಯಯನ ಮಾಡಿ ಪತ್ರಿಕೋದ್ಯಮದತ್ತ ಆಕರ್ಷಿತರಾದವರು. ಗಲ್ಪ್ ದೇಶದಲ್ಲಿ ಮೊದಲ ಕನ್ನಡ ವೆಬ್ ಸೈಟ್ ಆರಂಭಿಸಿದ ಬಿ ಜಿ ಮೋಹನ್ ದಾಸ್ ಅವರು   ಎರಡು ದಶಕಗಳ ಕಾಲ ಗಲ್ಪ್ ಕನ್ನಡಿಗ ವೆಬ್ ಸೈಟ್ ಸೇರಿದಂತೆ ಹಲವು ಕನ್ನಡ ವೆಬ್ ಸೈಟ್ ಗಳನ್ನು ಆರಂಭಿಸಿ ಯಶಸ್ಸು ಸಾಧಿಸಿದವರು.
ಗೋವಿಂದಪ್ಪ ಬೆಸ್ಕೂರ್ ಮತ್ತು   ಸೀತಾದೇವಿ ಇವರ ಪುತ್ರ ಬಿ ಜಿ ಮೋಹನ್ ದಾಸ್  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕರಾಗಿದ್ದಾರೆ.

(ಗಲ್ಪ್ ಕನ್ನಡಿಗ)ಮಣಿಪಾಲ್ ವಿಶ್ವವಿದ್ಯಾಲಯದ ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸ್ ನಿಂದ  ಪದವಿ ಮತ್ತು ಸ್ನಾತಕೋತ್ತರ ಪದವಿ (ಬಿಫಾರ್ಮ್ ಮತ್ತು ಎಂಪಾರ್ಮ್) ಮಾಡಿ ಕಸ್ತೂರ್ಬಾ ಆಸ್ಪತ್ರೆಯಲ್ಲೇ ಅದರ ಮೊದಲ ಮುಖ್ಯ ಔಷಧಿಕಾರಿ ಆಗಿ ಕೆಲಸ ಪ್ರಾರಂಭಿಸಿದ ಅವರು ಬಳಿಕ ಎಂಫಾರ್ಮ್ ಅನ್ನು ಪೂರೈಸಿದ್ದರು. ನಂತರ ಭದ್ರಾವತಿಯ ವಿಐಎಸ್‍ಎಲ್‍ನಲ್ಲಿ ಕೆಲಸ ಮಾಡಿ ಆಮೇಲೆ ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್‍ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ಅದರ ಬಳಿಕ ಸೌದಿ ಅರೇಬಿಯಾ ನಂತರ ದುಬೈ, ಅಜ್ಮಾನ್‍ನಲ್ಲಿ  ಕಾರ್ಯನಿರ್ವಹಿಸಿದ್ದರು.

(ಗಲ್ಪ್ ಕನ್ನಡಿಗ)ಮಣಿಪಾಲ್ ಜೇಸಿಸ್, ಲಯನ್ಸ್ ಕ್ಲಬ್ ಗಳಲ್ಲಿ ಜವಾಬ್ದಾರಿ ನಿಭಾಯಿಸಿದ್ದ ಬಿ ಜಿ ಮೋಹನದಾಸ್ ಇವರಿಗೆ 2002ರಲ್ಲಿ ಮಣಿಪಾಲ್ ವಿಶ್ವವಿದ್ಯಾಲಯದ ಎಂಸಿಒಪಿಎಸ್ ಅಸಾಧಾರಣ ಸಾಧಕ ಅಲುಮ್ನಿ ಪ್ರಶಸ್ತಿ ನೀಡಲಾಯಿತು. ವಿಶ್ವ ಮಾನವ ಪ್ರಶಸ್ತಿ ಮತ್ತು ಕರ್ನಾಟಕ ಸಂಘ ಅಬುಧಾಬಿ ಅವರ ಪ್ರಥಮ ದ.ರಾ ಬೇಂದ್ರೆ  ಪ್ರಶಸ್ತಿ ಶಾರ್ಜಾ ಕರ್ನಾಟಕ ಸಂಘ ಅವರಿಂದ ಮಯೂರ ಪ್ರಶಸ್ತಿ ಬಂದರೆ, ಕಾಂತವರ ಕರ್ನಾಟಕ ಸಂಘವು 2017ರಲ್ಲಿ `ಅನ್ಶುಮಾಲಿ' ಬರೆದ  `ಗಲ್ಫ್ ಕನ್ನಡಿಗ-ಬಿ ಜಿ ಮೋಹನ್‍ದಾಸ್' ಎಂಬ ಪುಸ್ತಕವನ್ನು ಪ್ರಕಟಿಸಿತ್ತು. 2019ರಲ್ಲಿ ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಇವರು ಪಡೆದಿದ್ದು ಈ ಪ್ರಶಸ್ತಿ ಪಡೆದ ಮೊದಲ ಬೈಂದೂರಿಯನ್ ಮತ್ತು ಪ್ರಶಸ್ತಿ ಪಡೆದ 4ನೇ ಕೊಲ್ಲಿ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

(ಗಲ್ಪ್ ಕನ್ನಡಿಗ)ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ, ಹರೀಶ್ ಶೇರಿಗಾರ್ ದುಬಾಯಿ,  ನಾರಾಯಣ ದೇವಾಡಿಗ ದುಬಾಯಿ, ವಾಲ್ಟರ್ ನಂದಾಳಿಕೆ, ದೇವಾಡಿಗ ಸಂಘದ ಅಧ್ಯಕ್ಷ ರವಿ ಎಸ್.ದೇವಾಡಿಗ, ಮಾಜಿ ಅಧ್ಯಕ್ಷರಾದ ಧರ್ಮಪಾಲ್ ಯು.ದೇವಾಡಿಗ, ಹಿರಿಯಡ್ಕ ಮೋಹನ್‍ದಾಸ್ ಸೇರಿದಂತೆ ನೂರಾರು ಗಣ್ಯರು ಸಂತಾಪ ಸೂಚಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

(ಗಲ್ಪ್ ಕನ್ನಡಿಗ)