ನನ್ನ ಅಧಿಕಾರ ಅವಧಿಯಲ್ಲಿ ಡ್ರಗ್ ಮಾಫಿಯಾ ಇತ್ತು : ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್

ನನ್ನ ಅಧಿಕಾರ ಅವಧಿಯಲ್ಲಿ ಡ್ರಗ್ ಮಾಫಿಯಾ ಇತ್ತು : ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ತುಮಕೂರು 
(ಗಲ್ಫ್ ಕನ್ನಡಿಗ) ಬೆಂಗಳೂರು ಡ್ರಗ್ಸ್ ಮಾಫಿಯಾ ವಿಚಾರದ ಕುರಿತಂತೆ ಕೊರಟಗೆರೆಯಲ್ಲಿ‌ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, 
ಇದು‌ ಹೊಸದೇನು ಅಲ್ಲಾ,ನಾನು ಗೃಹಸಚಿವನಾಗಿದ್ದಾಗ ನನಗೆ ಸವಾಲಾಗಿತ್ತು ಎಂದಿದ್ದಾರೆ.

(ಗಲ್ಫ್ ಕನ್ನಡಿಗ)ಇವತ್ತು ಅಂತರಾಷ್ಟ್ರೀಯ ಮಾದಕ ದ್ರವ್ಯ ಜಾಲ ಬೆಂಗಳೂರಿನಲ್ಲಿ ಇನ್ನು ಹೆಚ್ಚಾಗಿದೆ.ಈ ವಿಚಾರವನ್ನ ಸಿಎಂ,ಗೃಹ ಸಚಿವರು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದ್ರು.

(ಗಲ್ಫ್ ಕನ್ನಡಿಗ)ಪಂಜಾಬ್ ನಲ್ಲೂ ಡ್ರಗ್ಸ್ ಮಾಫಿಯಾ ಹೆಚ್ಚಾಗಿ ಉಡ್ತಾ ಪಂಜಾಬ್ ಆಗಿತ್ತು.ಅದೇ ರೀತಿ ಉಡ್ತಾ ಬೆಂಗಳೂರು ಆಗಬಾರದು ಅನ್ನೋದು ನಮ್ಮಅಭಿಪ್ರಾಯ ಎಂದರು.

(ಗಲ್ಫ್ ಕನ್ನಡಿಗ)ಆಗ ಶಾಲಾ ಮಕ್ಕಳಿಗೆ ಚಾಕೊಲೇಟ್ ನಲ್ಲಿ ಮಾದಕ ದ್ರವ್ಯ ಹಾಕಿ ಕೊಟ್ಟಿದ್ದು ಸಹ ನನ್ನ‌ ಗಮನಕ್ಕೆ ಬಂದಿತ್ತು. ಕೊಟ್ಯಾಂತರ ರೂಪಾಯಿಯ ಮಾದಕ ದ್ರವ್ಯವನ್ನ ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣಕ್ಕು ಚಿತ್ರರಂಗಕ್ಕೂ ನಂಟು ಇರೋದಾಗಿ ತಾಳೆ ಹಾಕಲಾಗಿದೆ. ಈ ಬಗ್ಗೆ ಪರಿಶೀಲಿಸಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲು ಆಗ್ರಹ ಮಾಡ್ತೇನೆ ಎಂದು ತಿಳಿಸಿದರು.