ಬಿರುಮಲೆ ಬೆಟ್ಟದಲ್ಲಿ ಒಬ್ಬಳು ಹದಿಹರೆಯದ ಯುವತಿ, ನಾಲ್ವರು ಯುವಕರು; ಅನೈತಿಕ ಚಟುವಟಿಕೆ ವೇಳೆ ಭಜರಂಗದಳ ದಾಳಿ
Saturday, August 8, 2020
(ಗಲ್ಫ್ ಕನ್ನಡಿಗ)ಮಂಗಳೂರು; ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿ ಒಬ್ಬಳು ಹದಿಹರೆಯದ ಯುವತಿ ಜೊತೆ ನಾಲ್ವರು ಯುವಕರು ಅನೈತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ವೇಳೆ ಭಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.
(ಗಲ್ಫ್ ಕನ್ನಡಿಗ)ಬಿರುಮಲೆ ಬೆಟ್ಟಕ್ಕೆ ಒಬ್ಬಳು ಯುವತಿ ಮತ್ತು ನಾಲ್ವರು ಯುವಕರು ಕೇರಳ ನೊಂದಾಣಿಯ ಕಾರಿನಲ್ಲಿ ಬಂದಿದ್ದರು. ಇದರ ಮಾಹಿತಿ ಪಡೆದ ಭಜರಂಗದಳ ಕಾರ್ಯಕರ್ತರು ಬಿರುಮಲೆ ಬೆಟ್ಟಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಅನೈತಿಕ ಚಟುವಟಿಕೆಯಲ್ಲಿ ಈ ತಂಡ ತೊಡಗಿತ್ತು. ದಾಳಿ ನಡೆಸಿದ ಭಜರಂಗದಳ ಕಾರ್ಯಕರ್ತರು ಯುವಕರನ್ನು ಮತ್ತು ಯುವತಿಯನ್ನು ಪೊಲೀಸರಿಗೊಪ್ಪಿಸಿದೆ.
(ಗಲ್ಫ್ ಕನ್ನಡಿಗ)ಪೊಲೀಸರ ವಶದಲ್ಲಿರುವ ಇವರು ಗಾಂಜಾ ಸೇವಿಸಿರಬಹುದೆಂದು ಶಂಕಿಸಲಾಗಿದೆ. ಯುವತಿಯನ್ನು ಪ್ರೀತಿಯ ಹೆಸರಿನಲ್ಲಿ ಪುಸಲಾಯಿಸಿ ಕಾರಿನಲ್ಲಿ ಕರೆದುಕೊಂಡು ಬಂದು ಮಾದಕ ದ್ರವ್ಯ ನೀಡಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದರೆಂಬ ಶಂಕೆ ವ್ಯಕ್ತವಾಗಿದೆ.