ಭೀಕರ ದೃಶ್ಯ; ಉಪ್ಪಿನಂಗಡಿ ಕಾಂಚನದಲ್ಲಿ ಹೊಳೆಯಲ್ಲಿ ಕೊಚ್ಚಿ ಹೋದ ಪಿಕಪ್ (video)
Saturday, August 8, 2020
(ಗಲ್ಫ್ ಕನ್ನಡಿಗ)ಮಂಗಳೂರು; ಉಪ್ಪಿನಂಗಡಿಯ ಕಾಂಚನದಲ್ಲಿ ಹೊಳೆಯಲ್ಲಿ ಪಿಕಪ್ ವಾಹನವೊಂದು ಕೊಚ್ಚಿ ಹೋಗುತ್ತಿದ್ದ ವಿಡಿಯೋ ದೃಶ್ಯ ವೈರಲ್ ಆಗಿದೆ.
(ಗಲ್ಫ್ ಕನ್ನಡಿಗ) ರಾಷ್ಟ್ರೀಯ ಹೆದ್ದಾರಿಯ ಬೆಂಗಳೂರು ಮಂಗಳೂರು ಕಾಂಚನ ಕ್ರಾಸ್ ಬಳಿ ಪಿಕಪ್ ನೀರಿನಲ್ಲಿ ಕೊಚ್ಚಿಹೋಗಿದೆ. ಪಿಕಪ್ ವಾಹನ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರೂ ಚಾಲಕ ಆರೀಫ್ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
(ಗಲ್ಫ್ ಕನ್ನಡಿಗ)ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಪಿಕಪ್ ವಾಹನವು ರಸ್ತೆಯ ಬದಿಯಲ್ಲಿ ಹರಿಯುತ್ತಿರುವ ತೋಡಿಗೆ ಬಿದ್ದು ಈ ಘಟನೆ ನಡೆದಿದೆ. ಪಿಕಪ್ ನೀರಿನಲ್ಲಿ ಕೊಚ್ಚಿ ಹೋಗುವುದನ್ನು ಗಮನಿಸಿದ
ತೌಫೀಕ್ ಎಂಬವರು ನೀರಿಗಿಳಿದು ಪಿಕಪ್ ವಾಹನಕ್ಕೆ ಹಗ್ಗ ಹಾಕಿ ಸಾರ್ವಜನಿಕರ ಸಹಕಾರದೊಂದಿಗೆ ವಾಹನವನ್ನು ನೀರಿನಿಂದ ಮೇಲಕ್ಕೆ ಎತ್ತಿದ್ದಾರೆ.