ದ.ಕ.ದಲ್ಲಿ ಇಂದು 6 ಮಂದಿಯನ್ನುಬಲಿಪಡೆದ ಕೊರೊನಾ : 194 ಮಂದಿಗೆ ಪಾಸಿಟಿವ್
(ಗಲ್ಪ್ ಕನ್ನಡಿಗ)ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇಂದು (ಶನಿವಾರ) ಕೊರೊನಾದಿಂದ ಆರು ಮಂದಿ ಮೃತಪಟ್ಟಿದ್ದಾರೆ. ಮಂಗಳೂರು ತಾಲೂಕಿನ ಆರು ಮಂದಿ ಸಾವನ್ನಪ್ಪಿದ್ದು ಮೃತರ ಸಂಖ್ಯೆ 214 ಕ್ಕೆ ಏರಿಕೆಯಾಗಿದೆ
(ಗಲ್ಪ್ ಕನ್ನಡಿಗ)ಜಿಲ್ಲೆಯಲ್ಲಿ ಇಂದು 194 ಮಂದಿಗೆ ಕೊರೊನಾ ದೃಢಪಟ್ಟಿದ್ದು ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7, 075ಕ್ಕೆ ಏರಿಕೆಯಾದರೆ,
ಪಾಸಿಟಿವ್ ಪ್ರಕರಣಗಳ ಪೈಕಿ ತೀವ್ರ ಉಸಿರಾಟ ಸಮಸ್ಯೆ ಮತ್ತು ಶೀತ ಲಕ್ಷಣಗಳಿಂದಾಗಿ 110 ಮಂದಿಯಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದರೆ, ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 15 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 69 ಮಂದಿಗೆ ಸೋಂಕು ತಗುಲಿದ ಮೂಲಗಳೇ ಪತ್ತೆಯಾಗಿಲ್ಲ.
ಗಲ್ಪ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ)ಜಿಲ್ಲಾದ್ಯಂತ ಇಂದು 183 ಮಂದಿ ಗುಣಮುಖರಾಗಿ ಬಿಡುಗಡೆಹೊಂದಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು 3, 487 ಗುಣಮುಖರಾಗಿ ಮನೆಗಳಿಗೆ ಹಿಂದಿರುಗಿದ್ದಾರೆ. ಜಿಲ್ಲೆಯಲ್ಲಿ ಸಕ್ರೀಯ ಪ್ರಕರಣಗಳಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಳವಾಗಿರುವುದು ಸಮಾಧಾನ ತಂದಿದೆ
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 7075 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ವಿವಿಧ ಖಾಸಗಿ ಆಸ್ಪತ್ರೆ, ವೆನ್ಲಾಕ್ ಕೋವಿಡ್ ಆಸ್ಪತ್ರೆಗಳು ಸೇರಿದಂತೆ ವಿವಿಧೆಡೆ 3,374 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.