Sunday Special: ನಾಲ್ಕು ವರ್ಷದ ಪುಟಾಣಿಯ ಮ್ಯಾಜಿಕ್ ಶೋ; ಗೋಲಿ ಬಂದದ್ದು ಎಲ್ಲಿಂದ? (video)
Sunday, August 9, 2020
(ಗಲ್ಫ್ ಕನ್ನಡಿಗ) ಮಂಗಳೂರು; ಮ್ಯಾಜಿಕ್ ಶೋ ನೋಡಲು ಯಾರಿಗೆ ಇಷ್ಟವಿಲ್ಲ ಹೇಳಿ. ಕಣ್ಣಿಗೆ, ಮನಸ್ಸಿಗೆ ಆನಂದ ನೀಡುವ ಮ್ಯಾಜಿಕ್ ಶೋ ನೋಡಲು ಸಣ್ಣ ಮಕ್ಕಳಿಂದ ಹಿಡಿದು ಹಿರಿಯರ ತನಕ ಇಷ್ಟಪಡುತ್ತಾರೆ.
ಮ್ಯಾಜಿಕ್ ಶೋ ಮಾಡುವ ಮ್ಯಾಜಿಶಿಯನ್ಸ್ ಗಳ ತಂತ್ರಗಾರಿಕೆ, ಕಣ್ಕಟ್ಟು ತಿಳಿಯುವುದು ಕಷ್ಟ.
(ಗಲ್ಫ್ ಕನ್ನಡಿಗ)ಮಂಗಳೂರಿನ ನಾಲ್ಕು ವರ್ಷದ ಪುಟಾಣಿಯೊಬ್ಬಳು ತನ್ನ ಮೊದಲ ಮ್ಯಾಜಿಕ್ ಶೋ ಮಾಡಿ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಪ್ರತ್ಯುಷ ಎಂಬ ನಾಲ್ಕು ವರ್ಷದ ಪುಟಾಣಿ ಮಾಡಿರುವ ಮ್ಯಾಜಿಕ್ ಶೋ ವೊಂದು ಇಲ್ಲಿದೆ.
(ಗಲ್ಫ್ ಕನ್ನಡಿಗ)ಕಪ್ ನಲ್ಲಿದ್ದ ಗೋಲಿಯನ್ನು ಕಣ್ಣೆದುರೆ ಕೆಳಗಿಟ್ಟು ಅದು ಕೆಳಗಿರುವಂತೆಯೆ ತನ್ನ ಮಂತ್ರದಂಡದಿಂದ ಮತ್ತೊಂದು ಗೋಲಿಯನ್ನು ತೆಗೆಯುವುದು,ಕಪ್ ನಿಂದ ತೆಗೆದ ಕೆಂಪು ಗೋಲಿಯನ್ನು ಕಣ್ಣೆದುರೆ ಬಿಸಾಡಿ ಕಪ್ ನೊಳಗಿಂದ ನೀಲಿ ಗೋಲಿಯನ್ನು ತೆಗೆಯುವ ಮ್ಯಾಜಿಕ್ ಶೋ ಈಕೆ ಮಾಡಿದ್ದು ಅದರ ವಿಡಿಯೋ ನಿಮಗಾಗಿ...