-->

ಕಡಬದಲ್ಲಿ ವ್ಯಕ್ತಿಯ ಬಳಿ 2 ಪಿಸ್ತೂಲ್, ತೋಟೆ; ಪೊಲೀಸರ  ಬಲೆಗೆ ಬಿದ್ದ ಆರೋಪಿ

ಕಡಬದಲ್ಲಿ ವ್ಯಕ್ತಿಯ ಬಳಿ 2 ಪಿಸ್ತೂಲ್, ತೋಟೆ; ಪೊಲೀಸರ ಬಲೆಗೆ ಬಿದ್ದ ಆರೋಪಿ



(ಗಲ್ಫ್ ಕನ್ನಡಿಗ)ಮಂಗಳೂರು;  ಪರವಾನಿಗೆ ಇಲ್ಲದೆ  2 ಪಿಸ್ತೂಲ್ ಹೊಂದಿದ್ದ ವ್ಯಕ್ತಿಯನ್ನು  ಕಡಬ ಪೊಲೀಸ್ ಠಾಣೆ ಎಸ್. ಐ ರುಕ್ಮ ನಾಯ್ಕ್ ನೇತೃತ್ವದ  ಪೊಲೀಸರ ತಂಡ  ಬಂಧಿಸಿದೆ.



(ಗಲ್ಫ್ ಕನ್ನಡಿಗ)ಕಡಬ ಗ್ರಾಮದ ಪಾಲೋಳಿ ನಿವಾಸಿ ಜನಾರ್ಧನ್ ಗೌಡ ಬಂಧಿತ ಆರೋಪಿ. ಈತನ ಮನೆಯ ಮೇಲೆ ಖಚಿತ ಮಾಹಿತಿ ಮೇಲೆ ದಾಳಿ ಮಾಡಿದ ಪೊಲೀಸರು 2  ಪಿಸ್ತೂಲ್ ,2 ಖಾಲಿ ತೋಟೆ ಹಾಗೂ ರಂಜಕ, ಪೊಟ್ಯಾಶಿಯಂ ಕೇಪುಗಳನ್ನು ವಶಪಡಿಸಿಕೊಂಡಿದ್ದಾರೆ.

(ಗಲ್ಫ್ ಕನ್ನಡಿಗ) ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ವಶದಲ್ಲಿ ಇಟ್ಟುಕೊಳ್ಳುವುದು ಕಾನೂನು ಬಾಹಿರ ಅಪರಾಧವಾಗಿದ್ದು  ಈತನನ್ನು ಪೊಲೀಸರು  ದಸ್ತಗಿರಿ ಮಾಡಿ ವಶಕ್ಕೆ ಪಡಕೊಂಡು ಆತನ ಮೇಲೆ ಶಸ್ತ್ರಾಸ್ತಗಳ ಅಧೀನಿಯಮ  ಹಾಗೂ ಸ್ಪೋಟಕಗಳ ಅಧಿನಿಯಮದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

(ಗಲ್ಫ್ ಕನ್ನಡಿಗ) ದಕ್ಷಿಣ ಕನ್ನಡ  ಜಿಲ್ಲಾ ಪೊಲೀಸ್ ಅಧೀಕ್ಷಕರಾದ  ಬಿ.ಎಂ  ಲಕ್ಷ್ಮೀಪ್ರಸಾದ್  ರವರ ಆದೇಶದಂತೆ ಹಾಗೂ  ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್   ಹೆಚ್ಚುವರಿ ಪೊಲೀಸ್  ಅಧೀಕ್ಷಕರಾದ ವಿಕ್ರಂ  ಆಮ್ಟೆ ರವರ ಮಾರ್ಗದರ್ಶನದಂತೆ ,  ಪುತ್ತೂರು ಉಪವಿಭಾಗದ ಪೊಲೀಸ್  ಉಪಾಧೀಕ್ಷಕರಾದ  ದಿನಕರ ಶೆಟ್ಟಿ ರವರ ನಿದರ್ಶನದಂತೆ ಮತ್ತು ಪುತ್ತೂರು ಗ್ರಾಮಾಂತರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಉಮೇಶ್  ಉಪ್ಪಳಿಕೆ ರವರ ಸಲಹೆಯಂತೆ ಕಡಬ  ಪೊಲೀಸ್  ಠಾಣಾ ಉಪನಿರೀಕ್ಷಕರಾದ ರುಕ್ಮ ನಾಯ್ಕ್  ತಂಡ ಕಾರ್ಯಾಚರಣೆ ಮಾಡಿದೆ. 

(ಗಲ್ಫ್ ಕನ್ನಡಿಗ)ಕಾರ್ಯಾಚರಣೆಯಲ್ಲಿ  ಎ ಎಸ್. ಐ   ಚಿದಾನಂದ ರೈ, ಎಚ್. ಸಿ ಸ್ಕರಿಯ, ಪಿ ಸಿ   ಭವಿತ್ ರೈ, ಶ್ರೀಶೈಲ್, ಮಹೇಶ್ ,ಜೀಪು ಚಾಲಕ ಕನಕರಾಜ್  ಪಾಲ್ಗೊಂಡಿದ್ದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99