ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಎರಡಂಕೆಗೆ ಜಿಗಿದ ಕೊರೊನಾ ಸಾವಿನ ಪ್ರಕರಣ: ಹೆಚ್ಚುತ್ತಿದೆ ಆತಂಕ
(ಗಲ್ಪ್ ಕನ್ನಡಿಗ)ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸಾವಿನ ಪ್ರಕರಣ ದಿನೇ ದಿನೇ ಹೆಚ್ಚುತ್ತಿದ್ದು ಇಂದು ಮತ್ತೆ ಎರಡಂಕೆಗೆ ಏರಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಎಯಲ್ಲಿ ಇಂದು ಮತ್ತೆ 10 ಮಂದಿ ಕೊರೊನಾ ದಿಂದ ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಒಂದೆ ದಿನ ಹತ್ತು ಮಂದಿ ಸಾವನ್ನಪ್ಪುತ್ತಿರುವುದು ಇದು ಎರಡಣೆ ಬಾರಿಯಾಗಿದೆ.
(ಗಲ್ಪ್ ಕನ್ನಡಿಗ)ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಸಾವನ್ನಪ್ಪಿದ ಹತ್ತು ಮಂದಿಯಲ್ಲಿ ಮಂಗಳೂರು ತಾಲೂಕಿನ ಪಾಲೇ ಹೆಚ್ಚಿದೆ. ಮಂಗಳೂರಿನ ಏಳು ಮಂದಿ ಪುತ್ತೂರು, ಬೆಳ್ತಂಗಡಿಯ ತಲಾ ಒಬ್ಬರು ಮತ್ತು ಹೊರಜಿಲ್ಲೆಯ ಒಬ್ಬರು ಸಾವನ್ನಪ್ಪಿದ್ದಾರೆ. ಜಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 190 ಕ್ಕೆ ಏರಿಕೆಯಾಗಿದೆ.
ಗಲ್ಪ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ)ದ.ಕ ಜಿಲ್ಲೆಯಲ್ಲಿ ಇಂದು ಕೂಡ ಕೊರೊನಾ ಸೋಂಕಿತರ ಪ್ರಕರಣ ಸಂಖ್ಯೆ ಹೆಚ್ಚಿದೆ. 149 ಮಂದಿಗೆ ಇಂದು ಕೊರೊನಾ ದೃಢಪಟ್ಟಿದ್ದು ಇದರಲ್ಲಿ ಸಾರಿ ಪ್ರಕರಣದ 12
, ಐ ಎಲ್ ಐ ಪ್ರಕರಣದ 64, ಪ್ರಾಥಮಿಕ ಸಂಪರ್ಕದ 27 ಮಂದಿಗೆ ಕೊರೊನಾ ದೃಢಪಟ್ಟಿದ್ದು 46 ಮಂದಿಯ ಸೋಂಕಿನ ಮೂಲ ತಿಳಿದುಬಂದಿಲ್ಲ. ಇಂದು ಮಂಗಳೂರು ತಾಲೂಕಿ 79 ಬಂಟ್ವಾಳ ತಾಲೂಕಿನ 16, ಬೆಳ್ತಂಗಡಿ ತಾಲೂಕಿನ 21 ಪುತ್ತೂರು ತಾಲೂಕಿನ 20, ಸುಳ್ಯ ತಾಲೂಕಿನ ಒಬ್ಬರಿಗೆ ಮತ್ತು ಹೊರಜಿಲ್ಲೆಯ 12 ಮಂದಿಗೆ ಕೊರೊನಾ ದೃಢಪಟ್ಟಿದೆ.
(ಗಲ್ಪ್ ಕನ್ನಡಿಗ)ಜಿಲ್ಲೆಯಲ್ಲಿ ಇಂದು 82 ಮಂದಿ ಗುಣಮುಖರಾಗಿದ್ದು ಒಟ್ಟು ಗುಣಮುಖರಾದವರ ಸಂಖ್ಯೆ 3009 ಕ್ಕೆ ಏರಿಕೆಯಾಗಿದೆ. 3343 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ
(ಗಲ್ಪ್ ಕನ್ನಡಿಗ)