-->

ಅಯೋಧ್ಯೆ ಭೂಮಿ ಪೂಜೆ ಹೆಸರಲ್ಲಿ ಧ್ರುವೀಕರಣ, ಸಂಘ ಪರಿವಾರದ ಪ್ರಯತ್ನ ವಿಫಲಗೊಳಿಸಿ : ಪಾಪ್ಯುಲರ್ ಫ್ರಂಟ್ ಕರೆ

ಅಯೋಧ್ಯೆ ಭೂಮಿ ಪೂಜೆ ಹೆಸರಲ್ಲಿ ಧ್ರುವೀಕರಣ, ಸಂಘ ಪರಿವಾರದ ಪ್ರಯತ್ನ ವಿಫಲಗೊಳಿಸಿ : ಪಾಪ್ಯುಲರ್ ಫ್ರಂಟ್ ಕರೆ(ಗಲ್ಪ್ ಕನ್ನಡಿಗ)ಬೆಂಗಳೂರು : ಅಯೋಧ್ಯೆಯ ಭೂಮಿ ಪೂಜೆ ಕಾರ್ಯಕ್ರಮದ ಹೆಸರಲ್ಲಿ ದೇಶದ ಜನರನ್ನು ಧಾರ್ಮಿಕವಾಗಿ ವಿಭಜಿಸುವ ಸಂಘ ಪರಿವಾರದ ಪ್ರಯತ್ನವನ್ನು ಜನರು ಸೋಲಿಸಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್‌ಮೆನ್ ಒಎಂಎ ಸಲಾಂ ಕರೆ ನೀಡಿದ್ದಾರೆ.

ಗಲ್ಪ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ(ಗಲ್ಪ್ ಕನ್ನಡಿಗ)ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರಕಾರವು ಸಂವಿಧಾನದಲ್ಲಿ ತಿಳಿಸಿರುವಂತೆ ದೇಶದ ಎಲ್ಲ ನಾಗರಿಕರನ್ನು ಸಮಾನವಾಗಿ ಪರಿಗಣಿಸಬೇಕು. ಧಾರ್ಮಿಕ, ಸಾಂಸ್ಕೃತಿಕ ಅಥವಾ ದೇಶದ ಯಾವುದೇ ಇತರ ವಿವಾದಗಳ ಪರವಾಗಿ ಸರಕಾರ ನಿಲ್ಲಬಾರದು. ಬಾಬರಿ ಮಸೀದಿ ಧ್ವಂಸಗೊಂಡ ಭೂಮಿಯಲ್ಲಿ ಬುಧವಾರ (ಆ.5) ಅಯೋಧ್ಯಾ ಭೂಮಿ ಪೂಜೆ ನಡೆಸುತ್ತಿರುವುದು, ಎಲ್ಲ ರೀತಿಯಿಂದಲೂ ರಾಜಕೀಯಗೊಳಿಸಲ್ಪಟ್ಟ ತಪ್ಪಾದ ಧಾರ್ಮಿಕ ಕಾರ್ಯಕ್ರಮ. ಆದಾಗ್ಯೂ, ಇದನ್ನು ಸರಕಾರದ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಪ್ರಧಾನಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇದು ಅವರು ಅಧಿಕಾರ ಸ್ವೀಕರಿಸಿದಾಗ ಮಾಡಿದ ಪ್ರತಿಜ್ಞೆಯ ವ್ಯಾಪಕ ಉಲ್ಲಂಘನೆಯಾಗಿದೆ. ಮಾತ್ರವಲ್ಲದೆ, ದೇಶದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯದ ಉರಿಯುತ್ತಿರುವ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ. ಇದು ಮೋದಿ ಸರ್ಕಾರದ ನಿಜ ಬಣ್ಣವನ್ನು ತೆರೆದಿಡುತ್ತಿರುವ ಮತ್ತೊಂದು ಉದಾಹರಣೆಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.


(ಗಲ್ಪ್ ಕನ್ನಡಿಗ)ಹಿಂದುತ್ವ ಫ್ಯಾಶಿಸ್ಟರಿಂದ ಧ್ವಂಸ ಮಾಡಲ್ಪಟ್ಟ ಮುಸ್ಲಿಮರು ಶತಮಾನಗಳಿಂದ ಪ್ರಾರ್ಥಿಸುತ್ತಿದ್ದ ಪ್ರಾರ್ಥನಾ ಕೇಂದ್ರವಿದ್ದ ತಾಣದಲ್ಲಿ ಭೂಮಿ ಪೂಜೆ ನಡೆಯಲಿದೆ. ಈ ಭೀಕರ ಕೃತ್ಯದಲ್ಲಿ ಪಾಲ್ಗೊಂಡ ಕ್ರಿಮಿನಲ್‌ಗಳನ್ನು ಇನ್ನೂ ಕಾನೂನಿನ ಕುಣಿಕೆಯೊಳಗೆ ತಂದಿಲ್ಲ. ಇದೀಗ, ಧ್ವಂಸ ಕಾರ್ಯದಲ್ಲಿ ಭಾಗಿಯಾದ ಕ್ರಿಮಿನಲ್‌ಗಳ ಜೊತೆಗೆ, ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಪ್ರಧಾನಿಯವರು ದೇವಸ್ಥಾನ ನಿರ್ಮಾಣದಲ್ಲಿ ಭಾಗವಹಿಸುತ್ತಿದ್ದಾರೆ. ಹೊರ ಜಗತ್ತಿನಲ್ಲಿ ಪ್ರಧಾನಿ ಮೋದಿ ಮತ್ತು ಆರೆಸ್ಸೆಸ್ ಪ್ರಗತಿಪರ ಮತ್ತು ಒಳಗೊಳ್ಳುವಿಕೆಯ ಆಡಳಿತ ನಡೆಸುತ್ತಿರುವಂತೆ ತೋರಿಸಿಕೊಳ್ಳುತ್ತಿದೆ. ಆದರೆ, ದೇಶದೊಳಗೆ ಅವರು ಧಾರ್ಮಿಕ ದ್ವೇಷ ಮತ್ತು ಅಲ್ಪಸಂಖ್ಯಾತರು ಹಾಗೂ ದುರ್ಬಲ ವರ್ಗಗಳ ವಿರುದ್ಧ ಹಿಂಸಾಚಾರದ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಲಾಂ ಆಪಾದಿಸಿದ್ದಾರೆ.


(ಗಲ್ಪ್ ಕನ್ನಡಿಗ)ದೊಡ್ಡ ದೊಡ್ಡ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಮೋದಿ ಸರಕಾರ, ಎಲ್ಲ ರೀತಿಯಿಂದಲೂ ಐತಿಹಾಸಿಕ ವೈಫಲ್ಯವನ್ನು ಕಂಡಿದೆ. ದೇಶದ ಆರ್ಥಿಕತೆ ಅಸ್ಥಿರವಾಗಿದೆ. ಕೋವಿಡ್-19 ವಿಚಾರದಲ್ಲಿ ಜಗತ್ತಿನ ಬಹುತೇಕ ದೇಶಗಳು ನಿಯಂತ್ರಣ ಸಾಧಿಸುವತ್ತ ಮುನ್ನುಗ್ಗುತ್ತಿದ್ದರೆ, ಭಾರತ ಅತಿ ಹೆಚ್ಚು ಕೋವಿಡ್ ಪ್ರಕರಣಗಳನ್ನು ಹೊಂದಿದ ದೇಶವಾಗುವತ್ತ ಸಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.


(ಗಲ್ಪ್ ಕನ್ನಡಿಗ)ದೇಶದ ಜನರ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿರುವ ಆರ್ಥಿಕತೆ ಮತ್ತು ಅಭಿವೃದ್ಧಿಯಂತಹ ಪ್ರಮುಖ ವಿಚಾರಗಳನ್ನು ಬದಿಗೊತ್ತಿ, ಅವರಲ್ಲಿ ಕೋಮು ಧ್ರುವೀಕರಣ, ಉಗ್ರ ಧಾರ್ಮಿಕ ದ್ವೇಷದಂತಹ ಭಾವನೆಯ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ದುರದೃಷ್ಟಕರವೇನೆಂದರೆ, ಜಾತ್ಯತೀತ ಪ್ರತಿಪಕ್ಷಗಳೂ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿವೆ ಮತ್ತು ಜನತೆಗೆ ದೀರ್ಘಕಾಲದಿಂದ ತಾವು ತೋರಿದ ಬದ್ಧತೆಯನ್ನು ಮರೆತಿವೆ. ಅವರಲ್ಲಿ ಕೆಲವರು ಈ ವಿಷಯದಲ್ಲಿ ಬಿಜೆಪಿಗಿಂತ ತಾವೇ ಉತ್ತಮರು ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಓಎಂಎ ಸಲಾಂ ಅಭಿಪ್ರಾಯ ಪಟ್ಟಿದ್ದಾರೆ.


(ಗಲ್ಪ್ ಕನ್ನಡಿಗ)ಭೂಮಿ ಪೂಜೆಗೆ ಆಹ್ವಾನಿಸದಿರುವುದಕ್ಕೆ ಕೆಲವು ಕಾಂಗ್ರೆಸ್ ನಾಯಕರು ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದ ಕಾಂಗ್ರೆಸ್ ನಾಯಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಈ ಕಾರ್ಯಕ್ರಮವನ್ನು ಸಂಘ ಪರಿವಾರದೊಂದಿಗೆ ಸಂಭ್ರಮಿಸಲು ಮುಂದಾಗಿದ್ದಾರೆ. ಇದು ಕಾಂಗ್ರೆಸ್ ಪಕ್ಷದಲ್ಲಿರುವ ಹಲವಾರು ಪ್ರಮುಖ ನಾಯಕರ ನೈಜ್ಯ ಮುಖವನ್ನು ಪ್ರದರ್ಶಿಸಿದೆ. ದೇಶದ ಜಾತ್ಯತೀತ ಶಕ್ತಿಗಳು ಎಚ್ಚರಗೊಂಡು, ಸಕ್ರಿಯವಾಗದಿದ್ದಲ್ಲಿ ಭವಿಷ್ಯದ ದಿನಗಳು ದುರಂತಮಯವಾಗಲಿದೆ. ಹೀಗಾಗಿ ಎಲ್ಲ ಧರ್ಮಗಳ ನಿಜವಾದ ಪರಿಪಾಲಕರು, ಸಂಘ ಪರಿವಾರವು ಸೃಷ್ಟಿಸಿರುವ ಕೋಮು ದ್ವೇಷದಿಂದ ದೂರವುಳಿದು, ದೇಶವನ್ನು ಮತ್ತೊಮ್ಮೆ ವಿಭಜಿಸುವ ಅವರ ಪ್ರಯತ್ನಗಳನ್ನು ವಿಫಲಗೊಳಿಸೋಣ ಎಂದು ಸಲಾಂ ಮನವಿ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99