ಕುಲಾಲ ಸಂಘ ಮುಂಬಯಿ ನಿರ್ಮಾಣದ ಮಂಗಳೂರು ಕುಲಾಲ ಭವನದಲ್ಲಿ ಆ. 23 ರಂದು ತಳ ಮಹಡಿ ಉದ್ಘಾಟನೆ
Friday, August 14, 2020
ಮುಂಬಯಿ : ಮುಂಬಯಿ ಕುಲಾಲ ಸಂಘ ದ ಬಹುಕೋಟಿ ವೆಚ್ಚದಲ್ಲಿ ಮಂಗಳೂರಿನ ಮಂಗಳಾದೇವಿ ಸಮೀಪ, ನಿರ್ಮಾಣದ ಕೊನೆಯ ಹಂತದಲ್ಲಿರುವ ಕುಲಾಲ ಭವನ ನ ತಳ ಮಹಡಿಯಲ್ಲಿ "ಗುಡ್ ಲೈಪ್" ಫರ್ನೀಚರ್ ಮಳಿಗೆಯು ಆ. 23 ರಂದು ಉದ್ಘಾಟನೆಗೊಳ್ಳಲಿದೆ.
ಸುಸಜ್ಜಿತವಾದ ಈ ಮಳಿಗೆಯು ಸುಂದರ ಗೌಡ ಅವರ ಆಡಳಿತದಲ್ಲಿದ್ದು ಈಗಾಗಲೇ ಮಂಗಳೂರಿನ ಪರಿಸರದಲ್ಲಿ ಶೋ ರೂಂ ಗಳನ್ನು ಹೊಂದಿ ಪ್ರಸಿದ್ದಿಗೊಂಡಿದೆ. ಅತ್ಯಾಧುನಿಕ ಪೀಟೋಪಕರಣಗಳನ್ನು ಹೊಂದಿರುವ ಈ ಬ್ರಹತ್ ಫರ್ನೀಚರ್ ಮಳಿಗೆಯು ಉದ್ಘಾಟನೆಗೊಂಡು ಸುಸಜ್ಜಿತ ಫರ್ನಿಚರ್ ಮಾಲ್ ಗ್ರಾಹಕರ ಸೇವೆಗೆ ಅಣಿಯಾಗುತ್ತಿದೆ.
ಮುಂಬಯಿ ಮಹಾನಗರದಲ್ಲಿ ಸುಮಾರು 90 ವರ್ಷಗಳ ಇತಿಹಾಸವನ್ನು ಹೊಂದಿರುವ ಕುಲಾಲ ಸಂಘ ಮುಂಬಯಿ ಸುಮಾರು ಇಪ್ಪತೈದು ವರ್ಷಗಳ ಹಿಂದೆ ಮಂಗಳೂರಿನ ಮಂಗಳಾದೇವಿ ಸಮೀಪ ಕುಲಾಲ ಭವನವನ್ನು ನಿರ್ಮಾಣ ಮಾಡಲಾಗಿತ್ತು. ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವ ಮಂಗಳೂರು ಮಹಾನಗರಕ್ಕೆ ಸುಸಜ್ಜಿವಾದ ಸಭಾಂಗಣದ ಅಗತ್ಯವಿದ್ದುದನ್ನು ಗಮನಿಸಿ ಆರು ವರ್ಷಗಳ ಹಿಂದೆ ದಿ. ಪಿ ಕೆ ಸಾಲ್ಯಾನ್ ಅವರ ಅಧ್ಯಕ್ಷೀಯ ಅವಧಿಯಲ್ಲಿ 4 ಅಂತಸ್ತಿನ ವಿಶಾಲವಾದ ಸಂಕಿರಣವನ್ನು ನಿರ್ಮಿಸಿ ಅದರಲ್ಲಿ ೧೦೦೦ ಕ್ಕೂ ಮಿಕ್ಕಿ ಆಸನವಿರುವ ಸಭಾಗೃಹವನ್ನು ನಿರ್ಮಾಣದ ಯೋಜನೆ ಕಾರ್ಯರೂಪಕ್ಕೆ ತರಲಾಯಿತು.
ದಿ. ಪಿ ಕೆ ಸಾಲ್ಯಾನ್ ಅವರ ಅಧ್ಯಕ್ಷೀಯ ಅವಧಿಯಲ್ಲಿ ಪ್ರಾರಂಭಗೊಂಡ ಈ ಭವ್ಯ ಸಂಕಿರಣದ ಕೆಲಸ ಕಾರ್ಯಗಳು ಪ್ರಾರಂಭಗೊಂಡಿತ್ತು. ಆ ಬಳಿಕ ಸಂಘದ ಅಧ್ಯಕ್ಷರಾಗಿದ್ದ ಗಿರೀಶ್ ಸಾಲ್ಯಾನ್ ಅವರ ಕಾಲಾವಧಿಯಲ್ಲಿಯೂ ಕೂಡಾ ತ್ವರಿತ ಗತಿಯಲ್ಲಿ ಕಟ್ಟಡದ ಕೆಲಸವು ಮುಂದುವರಿಯಿತು. ಅನಂತರ ಅಧ್ಯಕ್ಷರಾಗಿ ಮುಂದುವರಿಯುತ್ತಿರುವ ದೇವದಾಸ್ ಎಲ್ ಕುಲಾಲ್ ಮತ್ತು ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಬಹಳ ಮುತುವರ್ಜಿಯಿಂದ ಸಮಾಜದ ಹಾಗೂ ದಾನಿಗಳ ಸಹಕಾರದಿಂದ ಈ ಯೋಜನೆಯನ್ನು ಪೂರ್ಣಗೊಳಿಸಲು ಶ್ರಮಿಸುತ್ತಿದ್ದಾರೆ.
ಕಳೆದ ನಾಲ್ಕು ತಿಂಗಳಿಂದ ಸರಕಾರದ ನಿಯಮದಂತೆ ಕಟ್ಟಡ ನಿರ್ಮಾಣದ ಕೆಲಸ ಸ್ಥಗಿತ ಗೊಂಡಿತ್ತು ಮುಂದಿನ ತಿಂಗಳಿನಿಂದ ಸಭಾಭವನದ (Auditorium) ಕೆಲಸಗಳು ಪ್ರಾರಂಭಗೊಳ್ಳಲಿದ್ದು . ಮುಂದಿನ ವರ್ಷ ಕೊನೆಯಲ್ಲಿ ಲೋಕಾರ್ಪಣೆಗೊಳ್ಳುವಲ್ಲಿ ಕುಲಾಲ ಸಂಘ ಶ್ರಮವಹಿಸಿ ಕೆಲಸಮಾಡುತ್ತಿದೆ.
ಪ್ರಸ್ತುತ 13600 ಚದರ ಅಡಿ ವಿಸ್ತೀರ್ಣದ ಪ್ರಥಮ ಮಾಳಿಗೆ ವಾಣಿಜ್ಯ ಮಳಿಗೆಗಳಿಗಾಗಿ ಸಂಪೂರ್ಣ ಸಿದ್ಧಗೊಂಡಿದ್ದು ಆಸಕ್ತಿ ಇರುವವರು ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ಕುಲಾಲ ಸಂಘದ ಈ ಮಹತ್ವದ ಯೋಜನೆ ಶೀಘ್ರ ಗತಿಯಲ್ಲಿ ಲೋಕರ್ಪನೆ ಕೊಳ್ಳುವುದಕ್ಕೆ ಇನ್ನಷ್ಟು ಆರ್ಥಿಕ ಸಹಕಾರ ಅಗತ್ಯವಿದೆ ಇದಕ್ಕೆ ದಾನಿಗಳು ಸಮಾಜ ಬಾಂಧವರು ಸಹಕಾರ ನೀಡುವಂತೆ ಸಂಘದ ಅಧ್ಯಕ್ಷ ದೇವದಾಸ ಎಲ್ ಕುಲಾಲ್ ಉಪಾಧ್ಯಕ್ಷ ರಘು ಮೂಲ್ಯ ಪಾದೆಬೆಟ್ಟು ಕಾರ್ಯದರ್ಶಿ ಕರುಣಾಕರ ಸಾಲಿಯಾನ್ ಕೋಶಧಿಕಾರಿ ಜಯ ಅಂಚನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್ ಗುಜರನ್. ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯಧ್ಯಕ್ಷ ಗಿರೀಶ್ ಬಿ ಸಾಲ್ಯಾನ್ ಹಾಗೂ ವಿವಿಧ ಸ್ಥಳೀಯ ಸಮಿತಿಯ ಪದಾಧಿಕಾರಿಗಳು. ಮಂಗಳೂರಿನ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್ ಬಂಗೇರ .ವಿನಂತಿಸಿಕೊಂಡಿದ್ದಾರೆ.
ವರದಿ :ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್