ಜನಸಾಮಾನ್ಯರ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟಾದ್ರೆ ಆ ನಷ್ಟವನ್ನ ಗಲಭೆಕೋರರಿಂದಲೇ ವಸೂಲಿ ಮಾಡೋ ಕಾನೂನು ಜಾರಿ ಆಗಬೇಕು........
Thursday, August 13, 2020
ಜನಸಾಮಾನ್ಯರ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟಾದ್ರೆ ಆ ನಷ್ಟವನ್ನ ಗಲಭೆಕೋರರಿಂದಲೇ ವಸೂಲಿ ಮಾಡೋ ಕಾನೂನು ಜಾರಿ ಆಗಬೇಕು........
ತುಮಕೂರು
ಜನಸಾಮಾನ್ಯರ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟಾದ್ರೆ ಆ ನಷ್ಟವನ್ನ ಗಲಭೆಕೋರರಿಂದಲೇ ವಸೂಲಿ ಮಾಡಬೇಕು ಎಂಬ ಕಾನೂನಾಗಿದೆ. ರಾಜ್ಯದಲ್ಲಿ ಜಾರಿಯಾಗಬೇಕು ಅಷ್ಟೇ ಎಂದು ಸಚಿವ ಮಾಧುಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ,
ನಮಗೆ ಈವರೆಗೂ ಅಂತಹ ಪರಿಸ್ಥಿತಿ ನಿರ್ಮಾಣ ಆಗಿರ್ಲಿಲ್ಲ.
ಈ ಹಿಂದೆ ನಡೆದಿದ್ದ ಘಟನೆಗಳಲ್ಲಿ ಜಾರಿ ಮಾಡಿರಲಿಲ್ಲ.
ಜಾರಿ ಕುರಿತು ಸರ್ಕಾರ ತೀರ್ಮಾನ ತಗೋಬೇಕು.
ಸಿಎಂ ಕ್ವಾರಂಟೆನ್ ನಲ್ಲಿದ್ದಾರೆ.
ಅವರು ಬಂದು ಕುಳಿತು ಸಭೆ ಮಾಡಿ ನಿರ್ಧಾರ ತಗೋತಾರೆ ಎಂದ್ರು.
ಎಸ್ ಡಿಪಿಐ, ಪಿಎಫ್ ಐ ಸಂಘಟನೆಗಳ ಬ್ಯಾನ್ ವಿಚಾರದ ಬಗ್ಗೆ ಮಾತನಾಡಿ,
ಕಾನೂನಿನ ಕ್ರಮ ಏನಿದ್ಯೋ ಅದನ್ನ ಖಂಡಿತ ಜಾರಿ ಮಾಡ್ತೀವಿ. ವರದಿ ಬರದೇ ರಿಯಾಕ್ಟ್ ಮಾಡೋಕಾಗಲ್ಲ ಎಂದರು.
ಮೂರುಸಾವಿರ ಜನ ಸೇರ್ತಾರೆ ಅಂದ್ರೆ ಪ್ರಚೋದನೆ ಇಲ್ಲದೇ, ಪ್ಲಾನ್ ಇಲ್ಲದೇ, ಆರ್ಗನೈಸೇಶನ್ ಇಲ್ಲದೇ ಮಾಡೋಕಾಗಲ್ಲ ಎಂದರು.